ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು ಮಹಿಳಾ ತಂಡಕ್ಕೆ ಇಂಡಿಪೆಂಡೆನ್ಸ್ ಕಪ್ ಫುಟ್ ಬಾಲ್ ಪ್ರಶಸ್ತಿ

0

ಮಡಂತ್ಯಾರು: ದ.ಕ. ಫುಟ್ ಬಾಲ್ ಅಸೋಸಿಯೇಷನ್ ಇದರ ವತಿಯಿಂದ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ 26ನೇ ವರ್ಷದ ಫುಟ್ ಬಾಲ್ ಪಂದ್ಯಾಟದ ಮಹಿಳಾ ವಿಭಾಗದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ತಂಡವು ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಮೂಡಿಗೆರಿಸಿದೆ.

ತಂಡದ ಪರವಾಗಿ ಆರ್ಯಶ್ರೀ ಇವರು ಪಂದ್ಯಕೂಟದ ಉತ್ತಮ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ಇವರು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾಟಗಳಲ್ಲಿ ತಲಾ ಒಂದು ಗೋಲುಗಳನ್ನು ಹೊಡೆದು ತಂಡ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸೇಕ್ರೆಡ್ ಹಾರ್ಟ್ ತಂಡವು ಸೆಮಿಫೈನಲ್ ನಲ್ಲಿ ಮಂಗಳೂರಿನ ಅಲೋಷಿಯಸ್ ತಂಡವನ್ನು 1-0 ಅಂತರದಲ್ಲಿ ಸೋಲಿಸಿದರೆ ಫೈನಲ್ ಕಾದಾಟದಲ್ಲಿ ಬಜ್ಪೆಯ ಸಂತ ಜೋಸೆಫ್ ತಂಡವನ್ನು 1-0 ಗೋಲಿನ ಅಂತರದಲ್ಲಿ ಮಣಿಸಿ ಸತತ ಎರಡನೇ ಬಾರಿಗೆ ಮಹಿಳಾ ವಿಭಾಗದ ಇಂಡಿಪೆಂಡೆನ್ಸ್ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ತಂಡದ ಸದಸ್ಯರು: ಆರ್ಯಶ್ರೀ ( ತಂಡದ ನಾಯಕಿ), ಸ್ನೇಹ,ಡೇಫ್ನಿ ಮಿಸ್ಕ್ವಿತ್, ಜೆನಿಶಾ, ಅನಿತಾ, ರಚನಾ ಶೆಟ್ಟಿ, ತೃಪ್ತಿ ಶೆಟ್ಟಿ, ಕ್ರಿಶ್ಮಿತಾ, ಶ್ರೇಯ, ರೇಚಲ್, ಸುಪ್ರಿಯಾ ಮತ್ತು ಭೂಮಿಕಾ

LEAVE A REPLY

Please enter your comment!
Please enter your name here