ಕಾಯರ್ತಡ್ಕ: ದಿವ್ಯಜೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕಾಯರ್ತಡ್ಕ: ದಿವ್ಯಜೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ನಡೆಯಿತು. ಧ್ವಜಾರೋಹಣವನ್ನು ಸೈಂಟ್ ಸೆಬಾಸ್ಟಿಯನ್ ಚರ್ಚ್ ಕಳೆಂಜ ಇಲ್ಲಿನ ಫಾದರ್ ಜೋಸೆಫ್ ವಲ್ಲುಕಾರನ್ ಇವರು ನೆರವೇರಿಸಿ, ಮಕ್ಕಳಿಗೆ ಶುಭ ಸಂದೇಶವನ್ನು ನೀಡಿದರು.

ಸ್ವಾತಂತ್ರ್ಯದ ಮಹತ್ವವನ್ನು ಅರಿತುಕೊಂಡು ರಾಷ್ಟ್ರಭಕ್ತಿಯನ್ನು ಬೆಳೆಸಿಕೊಂಡು, ರಾಷ್ಟ್ರದ ಪ್ರಜೆಗಳಾಗಿ ಭಾವೈಕ್ಯತೆಯಿಂದ ಬಾಳಬೇಕೆಂದು ಮಕ್ಕಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಮನೋಜ್, ಉಪಾಧ್ಯಕ್ಷೆಯಾದ ಸಾವಿತ್ರಿ ಹರೀಶ್ ಶೆಟ್ಟಿ, ಶಾಲಾ ಸಂಚಾಲಕಿ ಸಿಸ್ಟರ್ ಮೆರ್ಸಿಚೆರಿಯನ್, ಮುಖ್ಯ ಶಿಕ್ಷಕಿ ಸಿಸ್ಟರ್ ದಿವ್ಯ ಮರಿಯ ಎಸ್ ಎಚ್ ಹಾಗೂ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ ದೈಹಿಕ ಶಿಕ್ಷಣ ಶಿಕ್ಷಕ ಮಹೀನ್ ಇವರ ಮಾರ್ಗದರ್ಶನದೊಂದಿಗೆ ಯಶಸ್ವಿಯಾಗಿ ನಡೆಯಿತು. ಶಾಲಾ ವಿದ್ಯಾರ್ಥಿನಿ ನಿತ್ಯ ಹಾಗೂ ವಿದ್ಯಾರ್ಥಿ ಪ್ರಿನ್ಸ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಆನ್ ಏಂಜೆಲ್ ರೋಸ್ ಇವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here