ಕೊಕ್ಕಡ: ಮುಂಡೂರುಪಳಿಕೆ ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ

0

ಕೊಕ್ಕಡ: ಮುಂಡೂರುಪಳಿಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣದೊಂದಿಗೆ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗೊಳೊಂದಿಗೆ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು.

ಧ್ವಜಾರೋಹಣ ವನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಜಾರಪ್ಪ ಗೌಡ ಕುಂಡಡ್ಕ ಇವರು ನೆರವೇರಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಕು. ಮಾಲತಿ ಇವರು ಗಣ್ಯರನ್ನು ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ಶಾಲಾ ವಿಧ್ಯಾರ್ಥಿಗಳು ಹಾಗೂ ತಾಯಂದಿರ ಸಮಿತಿಯ ಅಧ್ಯಕ್ಷೆ ಅಶ್ವಿನಿ ಅಂಗನವಾಡಿ ಶಿಕ್ಷಕಿ ಗೀತಾ, ಸಹಾಯಕಿ ಕಮಲ, ಅಂಗನವಾಡಿ ಪುಟಾಣಿಗಳು, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರುಗಳು ವಿಠಲ ಗೌಡ ತೆಂಕುಬೈಲು ಮತ್ತು ಬಾಬು ಪಿತ್ತಿಲಕೋಡಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರು ಶಶಿ ಕುಮಾರ್ ಜೇಡರಪೇಟೆ, ಶಾಲಾ ಶಿಕ್ಷಕಿ ಸುಶೀಲ, ನಿವೃತ್ತ ಯೋಧರಾದ ಕ್ಯಾಪ್ಟನ್ ನಾಗೇಶ್, ಕುರ್ಲಾಜೆ ಶಾಲಾ ವಿಧ್ಯಾರ್ಥಿಗಳ ಪೋಷಕ ವೃಂದ, ಹಳೆ ವಿಧ್ಯಾರ್ಥಿಗಳು ಹಾಗೂ ದೇಶಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here