ಧರ್ಮಸ್ಥಳ: ನಡುಗುಡ್ಡೆಯಲ್ಲಿ ಹೆಬ್ಬಾವು ಪತ್ತೆ

0

ಧರ್ಮಸ್ಥಳ: ನಡುಗುಡ್ಡೆ ಕೃಷ್ಣಪ್ಪ ಗೌಡ ರವರ ಮನೆಯಲ್ಲಿ ಸುಮಾರು 60 ಕೆಜಿ ತೂಕ ಇದ್ದ ಹೆಬ್ಬಾವೊಂದು ಪತ್ತೆಯಾದ ಘಟನೆ ನಡೆದಿದೆ.ಮನೆಯ ಬೆಕ್ಕೊಂದನ್ನು ಹಿಡಿದು ನುಂಗುತಿರುವ ವೇಳೆ ಬೆಕ್ಕು ಕಿರುಚುವ ಶಬ್ದ ಕೇಳಿದ್ದು, ತಕ್ಷಣವೇ ಧರ್ಮಸ್ಥಳದ ಉರಗ ರಕ್ಷಕರಾದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮಾಸ್ಟರ್ ಸ್ನೇಕ್ ಪ್ರಕಾಶ್ ರವರಿಗೆ ತಿಳಿಸಿದರು. ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿರುತ್ತಾರೆ.

LEAVE A REPLY

Please enter your comment!
Please enter your name here