ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ನಿರ್ಮಾಣವಾಗಿರುವ ಪ್ರವಾಸಿ ಮಂದಿರ ನೂತನ ಕಟ್ಟಡದ ನಿರ್ಮಾಣದಲ್ಲಿ ಮತ್ತು ರಾಷ್ಟೀಯ ಹೆದ್ದಾರಿ ಗುತ್ತಿಗೆದಾರರಿಂದ ಒಂದು ರೂಪಾಯಿಯನ್ನು ತೆಗೆದುಕೊಳ್ಳಲಿಲ್ಲ, ಗುತ್ತಿಗೆದಾರ ಬಿಮಲ್ ಸಂಸ್ಥೆಗೂ ನನಗೂ ಯಾವುದೇ ಸಂಬಂಧ ಇಲ್ಲ ರಕ್ಷಿತ್ ಶಿವರಾಮ್ ರವರ ಆರೋಪಕ್ಕೆ ಬೆಳ್ತಂಗಡಿಯ ಮಾರಿಗುಡಿಯ ದೇವಿಯ ಮುಂದೆ ಪ್ರಾಮಾಣಕ್ಕೆ ಸಿದ್ಧ ಎಂದು ಶಾಸಕ ಹರೀಶ್ ಪೂಂಜರವರು ಆ.13ರಂದು ಉಜಿರೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನೂತನ ಪ್ರವಾಸಿ ಮಂದಿರ ನಿರ್ಮಾಣದ ಮೊದಲು ಅದರ ಸ್ಥಿತಿ ಯಾವ ರೀತಿಯಲ್ಲಿ ಇತ್ತು ಎಂದು ತಾಲೂಕಿನ ಜನತೆಗೆ ಗೊತ್ತಿತ್ತು. ವಸತಿಗೆ ಯೋಗ್ಯವಾಗಿರಲಿಲ್ಲ, ತಾಲೂಕಿಗೆ ಬರುವ ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಒಳ್ಳೆಯ ಪ್ರವಾಸಿ ಮಂದಿರ ಮಾಡಬೇಕು ಎಂದು ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನದಿಂದ ಮಾಡಲಾಗಿದೆ. ಗುತ್ತಿಗೆದಾರ ಬಿಮಲ್ ಸಂಸ್ಥೆ ಪ್ರವೀಣ್ ಪೂಜಾರಿ ಎಂಬ ಯುವಕ ಪ್ರಾರಂಭ ಮಾಡಿದ್ದು ಇದರಲ್ಲಿ ನನ್ನ ಪಾಲುಗರಿಕೆ ಇಲ್ಲ.ರೆಖ್ಯ ದೇವಸ್ಥಾನದ ತಡೆಗೋಡೆ ಈ ಬಾರಿಯ ಮಳೆಗೆ ಬಿದ್ದಿದೆ ಇಂಜಿನಿಯರ್ ರಿಂದ ಸರ್ಟಿಫಿಕೇಟ್ ಪಡೆದು ಗುತ್ತಿಗೆದಾರರಿಗೆ ಬಿಲ್ಲ್ ಪಾವತಿ ಮಾಡಲಾಗಿದೆ ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ.
ರಾಷ್ಟೀಯ ಹೆದ್ದಾರಿ ಗುತ್ತಿಗೆದಾರ ಡಿಪಿ ಜೈನ್ ರವರಿಂದ 3 ಕೋಟಿ ಲಂಚ ತೆಗೆದುಕೊಂಡಿದ್ದೇನೆ ಎಂದು ಆರೋಪ ಮಾಡಿದ್ದಾರೆ. ರಕ್ಷಿತ್ ಶಿವರಾಮ್ ಸಾಮಾನ್ಯ ಜ್ಞಾನ ಇಲ್ಲದೆ ರಾಜಕೀಯ ಮಾಡುತ್ತಿದ್ದು ಇದು ಕೇಂದ್ರ ಸರಕಾರದ ಯೋಜನೆ ಇವರಿಂದ ಒಂದು ರೂಪಾಯಿ ಪಡೆದುಕೊಂಡಿಲ್ಲ. ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರದ ಸಚಿವರಿಗೆ ಮನವಿ ಮಾಡಿ 700 ಕೋಟಿ ಅನುದಾನ ಮಂಜೂರು ಮಾಡುವಲ್ಲಿ ಪ್ರಯತ್ನ ಮಾಡಿರುತ್ತೇನೆ. ರಕ್ಷಿತ್ ಶಿವರಾಮ್ ರವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಇಲ್ಲಿಯ ಹವಮಾನದ ಬಗ್ಗೆ ಮಾಹಿತಿ ಇಲ್ಲದೆ ಇದ್ದುದರಿಂದ ಕಾಮಗಾರಿ ವಿಳಂಬವಾಗಿದೆ. ಇದನ್ನು ತಿಳಿದು ಸಂಸದರು ಮತ್ತು ನಾನು ಮಾತುಕತೆ ನಡೆಸಿ ಮುಗ್ರೋಡಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಸಮಯಕ್ಕೆ ಸರಿಯಾಗಿ ರಸ್ತೆ ಕಾಮಗಾರಿ ಆಗಲಿದೆ.2019 ರಲ್ಲಿ ಬಂದ ಪ್ರವಾಹ ಸಂದರ್ಭದಲ್ಲಿ ಇವರು ಎಲ್ಲಿ ಇದ್ದರು ಆಗ ಪ್ರತಿ ಮನೆ ಮನೆಗೆ ತೆರಳಿ ವೈಯಕ್ತಿಕ ದುಡಿದ ಹಣ ರೂ 45 ಲಕ್ಷ ಸಹಾಯಧನ ಮಾಡಿದ್ದೇನೆ. ಈಗ ಇವರು ತಹಶೀಲ್ದಾರ್, ಜಿಲ್ಲಾಧಿಕಾರಿ ಬರುವಾಗ ಹಿಂದಿನಿಂದ ಹೋಗುತ್ತಿದ್ದು ಯಾರಿಗಾದರೂ ಹಣ ಕೊಟ್ಟಿದ್ದಾರೆಯೇ, ಈ ಬಾರಿಯೂ ನೆರಿಯ ಪರಿಸರದಲ್ಲಿ ವೈಯಕ್ತಿಕ ಧನ ಸಹಾಯ ನಾನು ಮಾಡಿರುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಶ್ರೀನಿವಾಸ ರಾವ್, ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಉಪಸ್ಥಿತರಿದ್ದರು.