ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪಾಲಕರ ಹಬ್ಬ

0

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 8ರಂದು ಶಾಲಾ ಪಾಲಕರ ಹಬ್ಬವನ್ನು ಆಚರಿಸಲಾಯಿತು.

ಶಾಲಾ ಪಾಲಕರ ಪ್ರತಿಮೆಗೆ ಭಕ್ತಿಪೂರ್ವಕವಾಗಿ ಮಾಲಾರ್ಪಣೆ ಮಾಡುವುದರ ಜೊತೆಗೆ ಪುಷ್ಪಾರ್ಚನೆಗೈಯಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಂತ ರಫಾಯೆಲ್ ಚರ್ಚ್ ನ ಪ್ರಧಾನ ಧರ್ಮ ಗುರುಗಳಾದ ವಂ ಫಾ ರೋಶನ್ ಕ್ರಾಸ್ತ ಆಗಮಿಸಿದ್ದರು. ಶಾಲಾ ಸಂಚಾಲಕ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋರವರು ಮಕ್ಕಳು ಶಾಲಾ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದು ತಿಳಿಸಿ ಆಶೀರ್ವದಿಸಿದರು.

ಶಾಲಾ ಮುಖ್ಯೋಪಾಧ್ಯಾಯ ವಂ ಫಾ ಕ್ಲಿಫರ್ಡ್ ಪಿಂಟೋರವರು ಶಾಲಾ ಪಾಲಕರ ಪ್ರತಿಮೆಗೆ ದೀಪಾರತಿಯನ್ನು ನಡೆಸಿ ಶಾಲಾ ಪಾಲಕರ ದಿನದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಎಂಟನೇ ಹಾಗೂ ಐದನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ನೃತ್ಯ ಮತ್ತು ರೂಪಕದ ಮೂಲಕ ಪಾಲಕರ ದಿನದ ಮಹತ್ವವನ್ನು ಪ್ರಸ್ತುತಪಡಿಸಿ ಎಲ್ಲರ ಮನರಂಜಿಸಿದರು. ವನಮಹೋತ್ಸವದ ಪ್ರಯುಕ್ತ ಮಕ್ಕಳಿಗೆ ಆಯೋಜಿಸಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ , ಬ್ರದರ್ ಆಲ್ರಿಕ್ ಗ್ಸೇವಿಯರ್ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಪೇಕ್ಷ ಶಾಲಾ ಪಾಲಕರ ದಿನದ ಮಹತ್ವವನ್ನು ತಿಳಿಸಿದರು. ಫಾತಿಮಾ ಹಶ್ಮಿದಾ ಸ್ವಾಗತಿಸಿ, ಇಯೋನ್ ಡಿಕುನ್ಹ ವಂದಿಸಿದರು ಆಫ್ರಿಜಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಸಹಶಿಕ್ಷಕಿಯರಾದ ಪ್ರೀತಾ ಡಿಸೋಜ ಮತ್ತು ಮೇರಿ ಸುಜಾ ಸಹಕರಿಸಿದರು.

LEAVE A REPLY

Please enter your comment!
Please enter your name here