

ಕುವೆಟ್ಟು: ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ 13ನೇ ವರ್ಷದ ಗಣೇಶೋತ್ವವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆ.11ರಂದು ಸಮಿತಿಯ ಅಧ್ಯಕ್ಷ ಗೋಪಿನಾಥ್ ನಾಯಕ್ ಗುರುವಾಯನಕೆರೆ ಇವರ ಅಧ್ಯಕ್ಷತೆಯಲ್ಲಿ ವೆಲ್ಕಂ ಯೂತ್ ಕ್ಲಬ್ ಬಯಲು ರಂಗ ಮಂದಿರ ಮದ್ದಡ್ಕದಲ್ಲಿ ಜರಗಿತು.

ಸಮಿತಿಯ ಗೌರವಾಧ್ಯಕ್ಷ ಎಸ್ ಗಂಗಾಧರ್ ರಾವ್ ಕೆವುಡೇಲು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ನಿಕಟ ಪೂರ್ವಧ್ಯಕ್ಷ ಉಮೇಶ್ ಕುಮಾರ್ ಮದ್ದಡ್ಕ, ಕಾರ್ಯಧ್ಯಕ್ಷ ದಾಮೋದರ್ ಕುಂದರ್ ಸಬರಬೈಲು, ಪ್ರಧಾನ ಸಂಚಾಲಕ ಚಂದ್ರಶೇಖರ ಕೋಟ್ಯಾನ್, ದಿನೇಶ್ ಮೂಲ್ಯ ಕೊಂಡೆಮಾರ್, ಪ್ರಧಾನ ಕಾರ್ಯದರ್ಶಿ ಯತೀಶ್ ಪ್ರಭು ಮದ್ದಡ್ಕ, ಕೋಶಧಿಕಾರಿ ಅನುಪ್ ಬಂಗೇರ ಮದ್ದಡ್ಕ, ಕ್ರೀಡಾ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಮದ್ದಡ್ಕ, ಸಾಂಸ್ಕ್ರತಿಕ ಕಾರ್ಯದರ್ಶಿ ಲಲಿತಾ ಕೇದಳಿಕೆ, ಸುಜಾತ ಚಂದ್ರಹಾಸ್ ಕೇದೆ, ಕಾರ್ಯಕ್ರಮದ ಸಂಘಟಕರು ಚಂದ್ರಹಾಸ್ ಕೇದೆ, ಹಿರಿಯರಾದ ಜಗದೀಶ್ ಬಂಗೇರ, ಗೋಪಿನಾಥ್ ನ್ಯಾಯದಕಲ, ರಾಮಚಂದ್ರ ನ್ಯಾಯದಕಲ, ಟಿ ಕೃಷ್ಣ ರೈ ಸಬರಬೈಲು ಮತ್ತಿತರರು ಉಪಸ್ಥಿತರಿದ್ದರು.