


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೈಗಾರಿಕಾ ವಸಾಹತು ಪ್ರದೇಶದ ಉದ್ಯಮಿಗಳು ಸತತ ಎರಡು ತಿಂಗಳುಗಳಿಂದ ಸಂಪರ್ಕ ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ದುರಸ್ತಿಗೆ ಹೊರಾಟ ನಡೆಸುತ್ತಿದ್ದು ಇಂದು ಆ.12ರಂದು ಮಾನ್ಯ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿರುತ್ತಾರೆ.


ಸ್ಥಳದಲ್ಲೆ ಸಂಬಂಧಿಸಿದ ಗುತ್ತಿಗೆದಾರರಿಗೆ ಕರೆ ಮಾಡಿ ಸಂಪರ್ಕ ರಸ್ತೆ ಕಲ್ಪಿಸುವಂತೆ ತಿಳಿಸಿರುತ್ತಾರೆ. ಅದಲ್ಲದೇ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಬೆಂಗಳೂರಿನ ಕೈಗಾರಿಕಾ ನಿಗಮಕ್ಕೆ ತನ್ನಜೊತೆ ಇಲ್ಲಿನ ಉದ್ಯಮಿಗಳಿಗೆ ಬರಲು ಸೂಚಿಸಿದರು.
ಈ ಸಂಧರ್ಭದಲ್ಲಿ ಉದ್ಯಮಿಗಳಾದ ಪ್ರಶಾಂತ್ ಲಾಯಿಲ, ವೆಂಕಟ್ರಮಣ ಭಟ್, ಅಹಮದ್ ಮುಸ್ತಾಕ್ ಉಪಸ್ಥಿತರಿದ್ದರು.









