ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಿಎಲ್‌ಐಎ ಮೆಶಿನ್ ಅಳವಡಿಕೆ

0

ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಲ್ಯಾಬ್‌ನಲ್ಲಿ ಹಾರ್ಮೋನ್ ಪರೀಕ್ಷೆ, ಬಂಜೆತನ ಪರೀಕ್ಷೆ ಮತ್ತು ಸೋಂಕು ರೋಗಗಳ ಪತ್ತೆಗಾಗಿ ಕೆಮಿಲುಮಿನೆಸೆನ್ಸ್ ಇಮ್ಯೂನೊಲಿಸೆ ಸಿಎಲ್-900ಐ ಎಂಬ ಅತ್ಯಾಧುನಿಕ ಯಂತ್ರವನ್ನು ಆ.5ರಂದು ಅಳವಡಿಸಲಾಯಿತು.

ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ.ಹೆಗ್ಗಡೆಯವರ ಆಶಯದಂತೆ, ಡಿ.ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಿತದರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತದೆ. ಅವರ ನಿರ್ದೇಶನದಂತೆ ರೋಗಿಗಳಿಗೆ ಶೀಘ್ರವಾಗಿ ಮತ್ತು ನಿಖಿರವಾದ ವರದಿ ನೀಡಬಲ್ಲ ಅತ್ಯಾಧುನಿಕ ವೈದ್ಯಕೀಯ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಪ್ರಸ್ತುತ ಅಳವಡಿಸಿರುವ ಸಿಎಲ್-೯೦೦ಐ ಯಂತ್ರ ಅತ್ಯಂತ ಹೆಚ್ಚು ನಿಖರವಾಗಿ ಮತ್ತು ಅತೀ ಶೀಘ್ರವಾಗಿ ಫಲಿತಾಂಶ ನೀಡಬಲ್ಲದು.

ಇಲ್ಲಿ ಈಗಾಗಲೇ ಟೈಪ್-2 ಮಧುಮೇಹ ಪತ್ತೆ ಹಚ್ಚುವಲ್ಲಿ ಹೆಚ್ಚು ನಿಖರವಾದ ವರದಿ ನೀಡಬಲ್ಲ ಹೈಪಫಾರ್ಮೆನ್ಸ್ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ ಯಂತ್ರವನ್ನು ಅಳವಡಿಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್‌ಪಿಎಲ್‌ಸಿ ವಿಧಾನದ ಮೂಲಕ ಟೈಪ್-2 ಮಧುಮೇಹ ಪತ್ತೆ ಹಚ್ಚಲು ಸಾಧ್ಯವಾಗುವ ಏಕೈಕ ಆಸ್ಪತ್ರೆ ಇದಾಗಿದೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ತಿಳಿಸಿದರು.

p>

LEAVE A REPLY

Please enter your comment!
Please enter your name here