ಎಕ್ಸಲೆಂಟ್ ಮೂಡುಬಿದಿರೆಯ ನಿಶಾಂತ್ ಪಿ ಹೆಗ್ಡೆಯ ಶೈಕ್ಷಣಿಕ ಸಾಧನೆ- ಸ್ಪಷ್ಟ ಗುರಿಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ಉತ್ತಮ ನಿದರ್ಶನ

0

ಮೂಡುಬಿದರೆ: ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಏಕ ನಿಷ್ಠೆ ನಿರಂತರ ಹೊಸತನದ ಹುಡುಕಾಟ ಗುರಿಮುಟ್ಟುವಲ್ಲಿನ ಶ್ರದ್ಧೆ ವಿದ್ಯಾರ್ಥಿಗಿದ್ದರೆ ಆತನಿಗೆ ವಿದ್ಯೆ ಒಲಿಯುತ್ತದೆ. ಹೀಗೆ ನಿರಂತರ ಸಾಧನೆಯ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಅಪೂರ್ವ ಯಶಸ್ಸನ್ನು ಪಡೆದ ವಿದ್ಯಾರ್ಥಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ನಿಶಾಂತ್ ಪಿ.ಹೆಗ್ಡೆ ಪ್ರತಿಯೊಂದು ವಿದ್ಯಾರ್ಥಿಯ ಬಾಲ್ಯವು ಭಾವನಾ ಸಾಮ್ರಾಜ್ಯದ ಪರ್ವಕಾಲ ಈ ಪರ್ವಕಾಲದಲ್ಲಿ ತಂದೆ ಡಾ.ಪ್ರಶಾಂತ್ ಹೆಗ್ಡೆ ತಾಯಿ ಕೋಕಿಲ ಇವರಿಂದ ದೊರೆತ ಸಂಸ್ಕಾರ ನಿಶಾಂತ್‌ನನ್ನು ಸಾಧನೆಯ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಿತು. ವೈಚಾರಿಕವಾಗಿ ಚಿಂತನೆ ಮಾಡುವ, ವೈಜ್ಞಾನಿಕವಾಗಿ ಆಲೋಚಿಸುವ ಮತ್ತು ಸಮಾಜವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಗುರುವೃಂದ ನೀಡಿತು. ಅಸಾಧ್ಯವಾದುದನ್ನು ಪ್ರಯತ್ನ ಬಲದಿಂದಲೇ ಸಾಧಿಸಿದ ತಂದೆ ಎಕ್ಸಲೆಂಟ್ ಮೂಡುಬಿದಿರೆಯ ಕೋಚಿಂಗ್ ವಿಭಾಗದ ನಿರ್ದೇಶಕರಾದ ಡಾ. ಪ್ರಶಾಂತ್ ಹೆಗ್ಡೆ ಆದರ್ಶವಾದರು. ಕುತೂಹಲ ಆಲೋಚನಾಶಕ್ತಿ ಜ್ಞಾನ ಕಷ್ಟಪಟ್ಟು ಅಭ್ಯಾಸ, ಛಲದ ಪಂಚಾಕ್ಷರಿ ಮಂತ್ರದೊಂದಿಗೆ ಮುಂದುವರಿದ ನಿಶಾಂತನ ದೃಢತೆಗೆ ವಿದ್ಯೆ ಒಲಿಯಿತು. ಎಸ್‌ಎಸ್‌ಎಲ್‌ಸಿಯಲ್ಲಿ 622 ಅಂಕದೊಂದಿಗೆ 99.5 ಪ್ರತಿಶತ, ಪಿಯುಸಿಯಲ್ಲಿ 581 ಅಂಕದೊಂದಿಗೆ 95.16 ಪ್ರತಿಶತ, ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಐಟಿ ಪ್ರವೇಶ ಪರೀಕ್ಷೆ ಜೆಇಇ- ಮೈನ್ಸ್ 1ರಲ್ಲ್ಲಿ 99.32 ಪರ್ಸೆಂಟೈಲ್, ಜೆಇಇ- ಮೈನ್ಸ್ 2ರಲ್ಲ್ಲಿ 99.55 ಪರ್ಸೆಂಟೈಲ್, ಜೆಇಇ ಮೈನ್ಸ್ ಬಿ ಪ್ಲಾನಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ 378ನೇ ರ‍್ಯಾಂಕ್, ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ (NEET)ನಲ್ಲಿ 685ಅಂಕಗಳು, ಜೆಇಇ ಅಡ್ವಾನ್ಸ್‌ನಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ AIR  ನಲ್ಲಿ 4349 ನೇ ಸ್ಥಾನ, ಐಐಎಸ್‌ಇಆರ್ (IISER) ಜನರಲ್ ಮೆರಿಟ್‌ನಲ್ಲಿ AIR-33ನೇ ಸ್ಥಾನ ಹಾಗೂ BITSAT ಪರೀಕ್ಷೆಯಲ್ಲಿ ೨೮೭ನೇ ಸ್ಥಾನ ಪಡೆದು ಬಿ.ಟೆಕ್ ಮಾಡಲು ಪಿಲಾನಿಯಲ್ಲಿ ಸೀಟು ಪಡೆದಿದ್ದರು. ನಿಶಾಂತ್ ಪಿ ಹೆಗ್ಡೆ ಇವರು ತನ್ನ ಅತ್ಯುನ್ನತ ಶೈಕ್ಷಣಿಕ ಸಾಧನೆಯಿಂದ 4 ವರ್ಷಗಳ BS ಕೋರ್ಸು ಮಾಡಲು ಮದ್ರಾಸ್‌ನ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಐಐಟಿ ಕಾಲೇಜಿನಲ್ಲಿ IISER ರ‍್ಯಾಂಕ್ ಮೂಲಕ ಮೊದಲ ಸುತ್ತಲ್ಲೇ ಅರ್ಹತೆ, BITSATನಲ್ಲಿ 287ನೇ ಸ್ಥಾನದೊಂದಿಗೆ ಬಿಟೆಕ್‌ಗೆ ಅರ್ಹತೆ, ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ 4 ವರ್ಷದBS Programmeಗೆ ಐಐಎಸ್‌ಇಆರ್ ರ‍್ಯಾಂಕ್ ಮೂಲಕ ಪ್ರಥಮ ಸುತ್ತಲ್ಲೇ ಅರ್ಹತೆ ಪಡೆದಿದ್ದರು. ಪ್ರಸ್ತುತ ಗುಜರಾತ್‌ನ ಗಾಂಧಿನಗರ ಐಐಟಿಯಲ್ಲಿ ತಮ್ಮ ಇಚ್ಚೆಯ Integrated circuit Design Technologyಯ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಸೇರ್ಪಡೆಯಾಗಿದ್ದು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಹಲವು ಪ್ರಥಮಗಳ ಸರದಾರನೆನಿಸಿಕೊಂಡಿದ್ದಾನೆ. ಒಬ್ಬ ವಿದ್ಯಾರ್ಥಿಯು ತನ್ನ 2 ವರ್ಷಗಳ ಪಿಯು ವಿದ್ಯಾಭ್ಯಾಸದೊಂದಿಗೆ ಏಕಕಾಲದಲ್ಲಿ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ವೈದ್ಯಕೀಯ (Medical-NEET) ಹಾಗೂ ತಾಂತ್ರಿಕ IISc. (Technical-IIT) ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ವಿದ್ಯಭ್ಯಾಸ ನಡೆಸಲು ಅರ್ಹತೆ ಪಡೆಯುವುದು ತೀರ ಅಪರೂಪದ ಸಾಧನೆಯಾಗಿರುತ್ತದೆ.

ಗುರುಕುಲ ಮಾದರಿಯಲ್ಲಿ ವಿದ್ಯಾಭ್ಯಾಸ ನೀಡುತ್ತಿರುವ ಎಕ್ಸಲೆಂಟ್ ಸಂಸ್ಥೆಯ ಶಿಸ್ತಿನ ವಿದ್ಯಾರ್ಥಿಯಾಗಿ ಪೂರ‍್ವ ನಿರ್ಧರಿತ ವೇಳಾಪಟ್ಟಿಯೊಂದಿಗೆ ಪಾಠ ಪ್ರವಚನಗಳ ಅಧ್ಯಯನ ಮಾಡುತ್ತಿದ್ದ ನಿಶಾಂತ್ ಹೆಗ್ಡೆ ತಮ್ಮಿಂದಾಗದು ಕಷ್ಟವಾಗುತ್ತದೆ ಎಂದು ಹೇಳಿ ಸ್ಪರ್ಧಾತ್ಮಕ ಪರೀಕ್ಷೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳಿಗೆ ಮಾದರಿ ಹಾಗೂ ಸ್ಫೂರ್ತಿ. ಇವರ ಅತ್ಯುನ್ನತ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮತ್ತು ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಅಭಿನಂದಿಸಿರುತ್ತಾರೆ.

p>

LEAVE A REPLY

Please enter your comment!
Please enter your name here