ಆ.11: ಗುರುವಾಯನಕೆರೆ ಸಾಯಿರಾಮ್ ಫ್ರೆಂಡ್ಸ್ ವತಿಯಿಂದ ಕೆಸರ್ ಡೊಂಜಿ ದಿನ

0

ಗುರುವಾಯನಕೆರೆ: ಇಲ್ಲಿನ ಶಕ್ತಿನಗರದ ಸುಧೆಕ್ಕಾರ್ ಗದ್ದೆಯಲ್ಲಿ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ವತಿಯಿಂದ ಮೂರನೇ ವರ್ಷದ ಕೆಸರ್ ಡೊಂಜಿ ದಿನ ಕಾರ್ಯಕ್ರಮ ನಡೆಯಲಿದೆ.

ಕುವೆಟ್ಟು, ಓಡಿಲ್ನಾಳ, ತೆಂಕಕಾರಂದೂರು, ಮುಂಡೂರು, ಮೇಲಂತಬೆಟ್ಟು ಗ್ರಾಮಗಳ ಹಿಂದೂ ಬಾಂಧವರಿಗೆ 11-08-2024ರಂದು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಲಿಂಬೆ ಚಮಚ, ಹಾಳೆ ಓಟ, ಬಾಲ್ ಪಾಸಿಂಗ್, ತ್ರೋಬಾಲ್, ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ, ನಿಧಿ ಹುಡುಕುವುದು ಮುಂತಾದ ಸ್ಪರ್ಧೆಗಳು ನಡೆಯಲಿದೆ.

ಮಲ್ಲಿಪಾಡಿಯ ಕಂಬಳ ಕೋಣ ವಿಶೇಷ ಆಕರ್ಷಣೆಯಾಗಲಿದೆ.

LEAVE A REPLY

Please enter your comment!
Please enter your name here