ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ದ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ಬೆಳ್ತಂಗಡಿ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಕೊಲ್ಪದಬೈಲು ಎಸ್.ಕೆ ಹಾಲ್ ನಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಎಂ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ರಾಜಶೇಖರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಬೆನೆಟ್ ಡಿಸಿಲ್ವಾ, ವಕೀಲ ಮನೋಹರ್ ಕುಮಾರ್, ಸುಪ್ರೀಂ ಡೆಕೋರಟರ್ಸ್ ನ ಮಾಲಕರು ಅಥಿತಿಗಳಾಗಿ ಆಗಮಿಸಿದ್ದರು. ವೇದಿಕೆಯಲ್ಲಿರುವ ಅಥಿತಿಗಳಿಂದ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು.
ವೇದಿಕೆಯಲ್ಲಿ ತಾಲೂಕು ಶಾಮಿಯಾನ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಜೀವ ಬಿ.ಎಚ್, ನಾರಾಯಣ ಗೌಡ, ತಾಲೂಕು ಕ್ರೀಡಾ ಅಧ್ಯಕ್ಷ ಮಹಮ್ಮದ್ ಸಮೀರ್, ತಾಲೂಕು ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಶಬೀರ್ ಹಾಜರಿದ್ದರು.ಕಾರ್ಯದರ್ಶಿ ವಸಂತ ಇವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಮಾತುಕುಟ್ಟಿ ಲೆಕ್ಕಾಚಾರ ಮಂಡಿಸಿದರು. ಸಂಘದ ಸದಸ್ಯರಿಗೆ ಪೋಸ್ಟಲ್ ಇನ್ಸೂರೆನ್ಸ್ ಮಾಡಲು ಪೋಸ್ಟ್ ಆಫೀಸ್ ನಾ ಅಧಿಕಾರಿಗಳು ಹಾಜರಿದ್ದರು.
2024-25ನೇ ಸಾಲಿಗೆ ಅಧ್ಯಕ್ಷರಾಗಿ ಚಂದ್ರಶೇಖರ ಎಂ. ಇಂದಬೆಟ್ಟು ಪುನರಾಯ್ಕೆಗೊಂಡರು. ಕಾರ್ಯದರ್ಶಿಯಾಗಿ ಅಖಿಲ್ ಮೋಹನ, ಕೋಶಾಧಿಕಾರಿಯಾಗಿ ಮಾತುಕುಟ್ಟಿ ಹಾಗೂ ಹಿಂದಿನ ಇತರ ಪದಾಧಿಕಾರಿಗಳನ್ನು ಮರು ಆಯ್ಕೆ ಮಾಡಲಾಯಿತು.
ಮಾತುಕುಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ಜೋಸೆಫ್ ಕೆ.ಡಿ. ವಂದಿಸಿದರು.