ಪುತ್ತೂರು: ಬುರೂಜ್ ಇಂಗ್ಲಿಷ್ ಮೀಡಿಯಂ ವಿದ್ಯಾಸಂಸ್ಥೆಯ ಹೆಸರು ಕೇಳಿದೊಡನೆ, ಮನದಲ್ಲಿ ಮೂಡುವುದೇ ಅದೊಂದು ಪ್ರತಿಭೆಗಳ ಅನಾವರಣದ ಕೇಂದ್ರವೆಂದೆ.ಅದಕ್ಕಾಗಿಯೇ ಅವೆಷ್ಟೋ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಕೇಂದ್ರಕ್ಕೆ ದಾಖಲಾತಿ ಮಾಡುವುದಿದೆ.ಇಂತಹ ವಿದ್ಯಾರ್ಥಿಪ್ರೇರಿತ ವಿದ್ಯಾ ಕೇಂದ್ರದಲ್ಲಿ ಶಿಕ್ಷಕರುಗಳೂ ಕೂಡಾ ಪ್ರತಿಭೆಗಳ ಅನಾವರಣದ ದಾರಿಯಲೇ ಮುನ್ನುಗ್ಗುತ್ತಿರುವುದು ವಿದ್ಯಾರ್ಥಿಗಳಿಗೆ ಇನ್ನಷ್ಟು ಸ್ವಪ್ರೇರಿತರಾಗುವಲ್ಲಿ ಸಹಾಯಕವಾಗುತ್ತಿರುವುದು ಸುಳ್ಳಲ್ಲ.
ಅಂತಹಾ ಪ್ರತಿಭೆಗಳಲ್ಲಿ ಇದೀಗ ಮುಂಚೂಣಿಗೆ ಬಂದಿರೋ ಹೆಸರು ಬುರೂಜ್ ವಿದ್ಯಾಸಂಸ್ಥೆಯಲ್ಲಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿರೋ ಇರ್ವತ್ತೂರು ಗ್ರಾಮದ ಎಡ್ತೂರ್ ಪದವಿನ ರಝಿಯಾ ಎಸ್.ಪಿ. ಇವರು ತನ್ನ ಬಿಡುವಿನ ಸಮಯದಲ್ಲಿ ವಾರ್ತಾ ಮಾಧ್ಯಮದಲ್ಲೂ ತನ್ನ ಛಾಪನ್ನು ಮೂಡಿಸಿ, ಆ ಅದ್ಭುತ ಕಂಠದಲ್ಲಿ ಆಯಾ ಸಮಯಕ್ಕೆ ತಕ್ಕಂತೆ ಕವನಗಳು ರಚಿಸಿ ಹಾಡುತ್ತಿದ್ದಾರೆ.
ತಮ್ಮ ಮಧುರ ಕಂಠದ ಮೂಲಕ ಕೇಳುಗರ ಹಾವಭಾವ ಬದಲಾಯಿಸೋ ಶಕ್ತಿ ಹೊಂದಿರುವ ಆ ಧ್ವನಿಯು ಇನ್ನಷ್ಟು ರಾರಾಜಿಸಲಿ ಹಾಗೂ ಮನೆಗೆ, ಊರಿಗೆ ಮತ್ತು ಕಾರ್ಯನಿರ್ವಹಿಸುತ್ತಿರೋ ಸಂಸ್ಥೆಗೆ ಜೊತೆಗೆ ಆಶ್ರಯ ನೀಡಿರೋ ಭಾರತ ಭೂಮಿಗೂ ಉತ್ತಮ ಹೆಸರು ತರಲಿಯೆಂದು ಹಾರೈಸೋಣ.