

ಕಲ್ಮಂಜ: ಕಲ್ಮಂಜ ಗ್ರಾಮದ ನೀರಚಿಲುಮೆ ಸಮೀಪ ಮೀಯ ಎಂಬಲ್ಲಿ ಹಲವು ದಿನಗಳಿಂದ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು ರಸ್ತೆಗೆ ಜಾರಿತ್ತು.
ಈ ರಸ್ತೆಯು ನೀರಚಿಲುಮೆಯಿಂದ ದೇವರಗುಡ್ಡೆ, ಪಜಿರಡ್ಕ, ಸತ್ಯನಪಲ್ಕೆ ಹಾಗೂ ನಿಡಿಗಲ್ ಸಂಪರ್ಕ ಕಲ್ಪಿಸುತ್ತಿದ್ದು, ರಸ್ತೆಗೆ ಗುಡ್ಡ ಕುಸಿದ ಕಾರಣ ಶಾಲಾ ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ಸಂಚರಿಸಲು ಕಷ್ಟಕರವಾದ ಪರಿಸ್ಥಿತಿಯನ್ನು ಮನಗಂಡು ಕಲ್ಮಂಜ ಗ್ರಾಮ ಪಂಚಾಯತ್ ವತಿಯಿಂದ ಆ.05ರಂದು ಮಣ್ಣು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಗೌಡ ಸ್ಥಳದಲ್ಲಿದ್ದು, ಸಹಕರಿಸಿದರು.