ಬೆಳ್ತಂಗಡಿ: ಆಟಿ ಅಮಾವಾಸ್ಯೆ ಪುಣ್ಯ ದಿನದಂದು ಆ.04ರಂದು ತಾಲೂಕಿನ ಪುಣ್ಯ ಕ್ಷೇತ್ರ ಸವಣಾಲು ಅತಿಶಯ ತೀರ್ಥ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸವಣಾಲು ಆದಿನಾಥ ಜಿನ ಮಂದಿರದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಒಂಬತ್ತು ಲಕ್ಷ ಅನುದಾನ ಮಂಜೂರಾತಿಗೆ ಸಹಕರಿಸಿದ ರಕ್ಷಿತ್ ಶಿವರಾಂ ರವರನ್ನು ಸಮಿತಿಯವರು ಗೌರವಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್, ಸಮಿತಿಯ ಮುಖ್ಯಸ್ಥರಾದ ಕಿಶೋರ್ ಹೆಗ್ಡೆ, ಸುರೇಶ್, ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
p>