ನಡ: ನಡ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷೆ ಮಂಜುಳರವರ ಅಧ್ಯಕ್ಷತೆಯಲ್ಲಿ ಆ.03ರಂದು ಅಂಬೇಡ್ಕರ್ ಸಮಾಜ ಭವನ ನಡ ವಠಾರದಲ್ಲಿ ಜರುಗಿತು.
ಮಾರ್ಗದರ್ಶಕ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತೀಮ ಮುನ್ನಡೆಸಿದರು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ದಿವಾಕರ್, ಗ್ರಾ.ಪಂ. ಸದಸ್ಯರುಗಾಳದ ಎನ್.ಬಿ.ಹರಿಶ್ಚಂದ್ರ, ಎ.ವಿನಯ ಗೌಡ, ಸುಕೇಶ್, ಪ್ರವೀಣ್, ಜಯ ಶೆಟ್ಟಿ, ಲಲಿತಾ, ಸುಶೀಲ, ಸುಮಿತ್ರ, ಶಶಿಕಲಾ, ವಿನುತ, ಮಮತಾ, ಚಂದ್ರಹಾಸ ಗೌಡ, ಆಶಾಕಾರ್ಯಕರ್ತೆಯರು, ಇಲಾಖಾ ಅಧಿಕಾರಿಗಳಾದ ಉಷಾ ವಿ.ನಾಯಕ್, ಹಿರಿಯ ಪಶುವೈದ್ಯಕೀಯ ಪರೀಕ್ಷಕರು ರಾಜವರ್ಮ ಜೈನ್, ಆರೋಗ್ಯ ಸುರಕ್ಷತಾ ಅಧಿಕಾರಿ ಸಾವಿತ್ರಿ, ಅರಣ್ಯಾಧಿಕಾರಿ ಕಿರಣ್ ಪಾಟೀಲ್, ನಡ ಕನ್ಯಾಡಿ ಗ್ರಾಮಾಡಾಳಿತಾಧಿಕಾರಿ ಅಂಕಿತ್ ಜೈ, ತೋಟಗಾರಿಕಾ ಇಲಾಖೆ ಮಹವೀರ್, ಇಂಜಿನಿಯರ್ ಹರ್ಷಿತ್, ಅರಣ್ಯಾಧಿಕಾರಿ ಹೇಮಂತ್ ಡಿ.ಪಿ, ಮೆಸ್ಕಾಂ ಇಲಾಖೆಯ ಮಧುಬಾಬು, ಸಿಡಿಪಿಓ ನಾಗರಾಜ್, ತಾ.ಪಂ ಕೃಷಿ ಇಲಾಖೆಯ ನವನೀತ ಗೌಡ ಕೆ.ಎನ್ ರವರು ಉಪಸ್ಥಿತರಿದ್ದರು ಮತ್ತ್ಉ ತಮ್ಮ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸರಕಾರದ ವಿವಿಧ ಯೋಜನೆಗಳ ಬಗ್ಗೆ ಗ್ರಾಮಸ್ಥರಿಂದ ಅರ್ಜಿಯನ್ನು ಸ್ವೀಕರಿಸಲಾಯಿತು ಹಾಗೂ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.
ನಾಡಗೀತೆ ಹೇಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಸ್ವಾಗತಿಸಿ, ಅನುಪಾಲನಾ ವರದಿಯನ್ನು ಕಾರ್ಯದರ್ಶಿ ಕಿರಣ್ , ಜಮಾ -ಖರ್ಚು ಹಾಗೂ ವಾರ್ಡ್ ಸಭೆಯಲ್ಲಿ ಬಂದ ಪ್ರಸ್ತಾವನೆಗಳನ್ನು ಸಿಬ್ಬಂದಿ ಭಾರತಿ ಓದಿ, ಮೀನಾಕ್ಷಿ ನಿರೂಪಿಸಿದರು.