ಬಳಂಜ: ಬೀಳುವ ಹಂತದಲ್ಲಿದ್ದ ಮನೆಯನ್ನು ಸರಿಪಡಿಸಿದ ಗ್ರಾಮಸ್ಥರು- ಸತೀಶ್ ದೇವಾಡಿಗರ ಸೇವಾ ಮನೋಭಾವ ಶ್ಲಾಘನೀಯ

0

ಬಳಂಜ: ಬಳಂಜ ಗ್ರಾಮದ ಕಜೆಕೋಡಿ ದರ್ಖಾಸು ನಿವಾಸಿ ರಾಜೇಶ್ ಆಚಾರಿರವರ ಮನೆಯು ಬಾರಿ ಮಳೆಗೆ ಬೀಳುವ ಸ್ಥಿತಿಯಲ್ಲಿತ್ತು.ಇದನ್ನು ಮನಗಂಡ ಸಮಾಜಸೇವಕರು, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಉತ್ಸಾಹಿ ಯುವ ನಾಯಕ ಸತೀಶ್ ದೇವಾಡಿಗರ ನೇತೃತ್ವದಲ್ಲಿ ಯುವ ನಾಯಕರುಗಳಾದ ಪುರಂದರ ಪೂಜಾರಿ ಪೇರಾಜೆ, ಅಶ್ವಿನ್ ಕುಮಾರ್ ಬೊಂಟ್ರೋಟ್ಟು, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ದಿನೇಶ್ ಪಿ.ಕೆ, ದೇವಿ ಪ್ರಸಾದ್ ಶೆಟ್ಟಿ, ದೇಜಪ್ಪ ಪೂಜಾರಿ (ಅಮ್ಮಿ), ಹಿರಿಯ ನಾಯಕರಾದ ರಮನಾಥ್ ಶೆಟ್ರು, ಸಮಾಜ ಸೇವಕರಾದ ಸದಾನಂದ ಪೂಜಾರಿ ಬೊಂಟ್ರೋಟ್ಟು, ಪಂಚಾಯತ್ ಸದಸ್ಯರಾದ ರವೀಂದ್ರ ಬಿ.ಅಮೀನ್, ಪ್ರಶಾಂತ್ ಶೆಟ್ರು ಕಜೆಕೋಡಿ, ಪುರುಷೋತ್ತಮ ಅಚಾರಿ ಅಟ್ಲಾಜೆ, ಪ್ರವೀಣ್ ಪೂಜಾರಿ ಮುಡಾಯಿಬೆಟ್ಟು, ಸದಾನಂದ ತೋಟದಪಲ್ಕೇ, ಅನ್ವಿತ್ ಕುಮಾರ್ ಮುಡಯಿಬೆಟ್ಟು, ರೂಪಾ ಮುಡಯಿಬೆಟ್ಟು, ತುಳಸಿ ಅಟ್ಲಾಜೆ, ಪ್ರೇಮಾ ಅಶೋಕ್ ಮುಡಯಿಬೆಟ್ಟು ಇವರೆಲ್ಲರ ಸಹಕಾರದಿಂದ ಮನೆಯ ಮಾಡಿಗೆ ಟರ್ಪಾಲು ಹಾಕಿ ಮಳೆಯ ನೀರು ಸೋರದಂತೆ ತಕ್ಕ ಮಟ್ಟಿನ ವ್ಯವಸ್ಥೆ ಮಾಡಲಾಗಿದೆ.

ಬಾವಿಯಿಂದ ನೀರು ತೆಗೆಯಲು ವ್ಯವಸ್ಥೆ ಕೂಡ ಇರಲಿಲ್ಲ ಅದಕ್ಕೆ ಬೇಕಾಗುವ ಮರದ ದಿಂಬುನ ವ್ಯವಸ್ಥೆ ಕೂಡ ಮಾಡಲಾಯಿತು.ಮಾನವೀಯ ನೆಲೆಯಲ್ಲಿ ಸಹಕಾರ ಕೊಟ್ಟ ಎಲ್ಲ ಹಿರಿಯರಿಗೆ, ಸಹೋದರ ಸಹೋದರಿಯರಿಗೆ ರಾಜೇಶ್ ಕುಟುಂಬದವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here