

ಬೆಳ್ತಂಗಡಿ: ಬೆಳ್ತಂಗಡಿ-ಉಪ್ಪಿನಂಗಡಿ ಖಾಸಗಿ ಬಸ್ ನೌಕರರ ಸಂಘದ ಪದಗ್ರಹಣ ಜು.26ರಂದು ಬೆಳ್ತಂಗಡಿಯ ಸುವರ್ಣ ಆರ್ಕೇಡ್ ನಲ್ಲಿ ನಡೆಯಿತು.
2024-2026ನೇ ಸಾಲಿನ ಖಾಸಗಿ ಬಸ್ ನೌಕರರ ಅಧ್ಯಕ್ಷರಾಗಿ ಸಿದ್ದಿಕ್ ಕೆಂಪಿ, ಉಪಾಧ್ಯಕ್ಷರಾಗಿ ಪದ್ಮಪ್ರಸಾದ್ ಜೈನ್ ಬೆಳ್ತಂಗಡಿ, ಸಹ ಉಪಾಧ್ಯಕ್ಷರಾಗಿ ನಾರಾಯಣ ಗೌಡ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಜಿ ಬೆಳ್ತಂಗಡಿ, ಸಹ ಕಾರ್ಯದರ್ಶಿಯಾಗಿ ಮನ್ಸೂರ್ ಉಪ್ಪಿನಂಗಡಿ, ಪ್ರವೀಣ್ ಪಿಂಟೋ ಬೆಳ್ತಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಚಿದಾನಂದ ಸಾಲಿಯಾನ್, ಕೋಶಾಧಿಕಾರಿಯಾಗಿ ಇಲಿಯಾಸ್, ಸಾಮಾಜಿಕ ಜಾಲತಾಣ ಜಯರಾಮ್, ಗೌರವ ಸಲಹೆಗಾರರಾಗಿ ಚಾಬಕ್ಕ, ಮೋಹನ್, ದಿವಾಕರ್ ಶೆಟ್ಟಿ, ಮಹಮ್ಮದ್, ಕಾನೂನು ಗೌರವ ಸಲಹೆಗಾರರಾಗಿ ಪ್ರಶಾಂತ್ ಕುಮಾರ್ ರವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಖಾಸಗಿ ಬಸ್ ನೌಕರರ ಸಂಘ ಬೆಳ್ತಂಗಡಿ ಮತ್ತು ಉಪ್ಪಿನಂಗಡಿಯ ಚಾಲಕರು ಮತ್ತು ನಿರ್ವಾಹಕರು ಮತ್ತು ಬಸ್ ಏಜೆಂಟುಗಳು ಉಪಸ್ಥಿತರಿದ್ದರು.