ಬೆಳ್ತಂಗಡಿ: ಮಂಜುಶ್ರೀ ಸೀನಿಯರ್ ಚೇಂಬರ್ ವತಿಯಿಂದ ಮಳೆ ನೀರು ಕೊಯ್ಲು ಮತ್ತು ಮರು ಬಳಕೆಯ ಬಗ್ಗೆ ಕಾರ್ಯಗಾರವು ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜು.27ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕುಮಾರ್ ಜೈನ್ ಮಾಡಿದರು ಇನ್ನೂ ಅವರು ಮಾತನಾಡಿ ಮಳೆಗಾಲದಲ್ಲಿ ನೀರನ್ನು ಹಾಳುಮಾಡುದಕ್ಕಿಂತ ನೀರನ್ನು ಭೂಮಿಗೆ ಹಿಂಗಿಸಬೇಕು. ಆ ನೀರನ್ನು ಭೂಮಿಗೆ ಹಿಂಗಿಸದಿದ್ದಾರೆ ಮುಂದಿನ ಜನಾಂಗಕ್ಕೆ ಕುಡಿಯಲು ಕೂಡ ನೀರು ಇಲ್ಲದಂತವಾಗುತ್ತಾದೆ ತುಂಬಾ ಕಷ್ಟಪಡಬೇಕಾಗುತ್ತಾದೆ.
ನಾವು ಅಂತರ್ಜಾಲವನ್ನು ಇಂಗಿಸದಿದ್ದಾರೆ ಮಳೆಗಾಲದಲ್ಲಿ ಪೋಲವಾಗುಂತಹ ನೀರನ್ನು ಸಂಗ್ರಹಿಸದಿದ್ದರೆ ತುಂಬಾ ಕಷ್ಟವಾಗುತ್ತಾದೆ, ನೀರು ಎಷ್ಟು ಬೇಕು ಎಂಬುದು ನಮ್ಮಗೆಲ್ಲ ಗೊತ್ತಿದೆ ಬೆಳ್ಳಿಗೆ ಎದ್ದು ಪ್ರತಿದಿನ ಮುಖ್ಯ ಕಾರ್ಯವನ್ನು ಹಿಡಿದುಕೊಂಡು ಪ್ರತಿಯೊಂದು ಕಾರ್ಯವನ್ನು ಮಾಡಬೇಕಾದರೂ ನೀರಿನ ಅತ್ಯಅಶ್ಯಕವಾಗಿ ನೀರು ಬೇಕು.ಮಳೆಕೊಯ್ಲಿನ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಹೇಳಿದರು.
ಮಕ್ಕಳಿಗೆ ಇದರ ಬಗ್ಗೆ ಗೊತ್ತಾಗಬೇಕು.ಮಳೆಕೊಯ್ಲುವನ್ನು ಎಲ್ಲಾ ಮನೆಯವರು ಮಾಡಬೇಕು.ಇದನ್ನು ಹತ್ತು ಜನರಿಗೆ ತಿಳಿಸಬೇಕು ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಅಧ್ಯಕ್ಷ ವಾಲ್ಟರ್ ಡಿ.ಸಿಕ್ವೇರಾ ವಹಿಸಿದರು.
ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಪೃಥ್ವಿರಂಜನ್ ರಾಜ್, ಕಾರ್ಯದರ್ಶಿ ಜಾನ್ ಅರ್ವಿನ್ ಡಿ’ಸೋಜ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಮಳೆ ನೀರು ಸಂಗ್ರಹ,ಮರುಪೂರ್ಣ ಬಗ್ಗೆ ಸುದ್ದಿ ಅರಿವು ಕೇಂದ್ರದ ಸಂಪನ್ಮೂಲ ವ್ಯಕ್ತಿ ಕಿರಣ್ ಕುಮಾರ್ ಮತ್ತು ಹೊನ್ನಪ್ಪ ಗೌಡ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷ ಪ್ರಮೋದ್ ಆರ್ ನಾಯಕ್, ಉಪಾಧ್ಯಕ್ಷ ಮಂಜುನಾಥ್ ರೈ, ಸದಸ್ಯರುಗಳಾದ ಹರೀಶ್ ಶೆಟ್ಟಿ, ದಯಾನಂದ, ರಾಜರಾಮ್, ಬಿ.ಸಿ ಆಶೋಕ್ ಕುಮಾರ್, ಉಪಸ್ಥಿತರಿದ್ದರು.
ಮಾಜಿ ಅದ್ಯಕ್ಷ ಲ್ಯಾನ್ಸಿ ಎ.ಪಿರೇರಾ ಕಾರ್ಯಕ್ರಮ ನಿರ್ವಹಿಸಿ , ಕಾರ್ಯದರ್ಶಿ ಜಾನ್ ಅರ್ವಿನ್ ಡಿ’ಸೋಜ ಸ್ವಾಗತಿಸಿ, ವಂದಿಸಿದರು.