ಕೊಕ್ಕಡ: ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಜುಲೈ 24ರಂದು ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಶಾಲಾ ಸಭಾಭವನದಲ್ಲಿ ನಡೆಸಲಾಯಿತು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಿದರು. ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ, ಕರ್ನಾಟಕ ಪ್ರಾದೇಶಿಕ ಶಿಕ್ಷಣ ಆಯೋಗದ ಕಾರ್ಯದರ್ಶಿಗಳಾದ ವಂದನೀಯ ಫಾ.ಡಾ|ಪ್ರಾನ್ಸಿಸ್ ಅಸಿಸ್ಸಿ ಅಲ್ಮೇಡಾರವರು ಆಗಮಿಸಿ ಮಕ್ಕಳ ಬೆಳವಣಿಗೆಗೆ ಪೋಷಕರ ಸಂಸ್ಕಾರಯುತ ಬಾಂಧವ್ಯ ಅಗತ್ಯ ಎಂದು ತಿಳಿಸಿದರು.
ಶಾಲಾ ಸಂಚಾಲಕ ವಂದನೀಯ ಫಾ.ಜಿಬಿನ್ ರವರು ರಾಷ್ಟ್ರೀಯ ಪೋಷಕರ ದಿನದ ಶುಭಾಶಯಗಳನ್ನು ಕೋರಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಪ್ರಸ್ತುತ ಸಾಲಿಗೆ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಶಾಲಾ ಮುಖ್ಯೊಪಾದ್ಯಾಯಿನಿ ಸಿ. ಚೈತನ್ಯರವರು ನಡೆಸಿಕೊಟ್ಟರು. PTA ಅಧ್ಯಕ್ಷರಾಗಿ ಜಾನ್ಸನ್ ಗಲ್ಭಾವೋ, ಸದಸ್ಯರಾಗಿ ಗಣೇಶ್ ಕಾಶಿ, ಧರ್ಮರಾಜ್ ಅಡ್ಕಡಿ, ರೆಜಿ ವರ್ಗೀಸ್ ಸರೋಲಿ, ಶೈಲೇಶ್, ಫೈಝಲ್ ನೆಲ್ಯಾಡಿ, ಪ್ರಿಯಾ, ಶಶಿಕಲಾ ರವರು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ವಿಲ್ಫ್ರೆಡ್ ಪಿಂಟೊ, ಫಾ.ಅರುಣ್, PTA ನಿಕಟಪೂರ್ವ ಅಧ್ಯಕ್ಷ ಜಯೇಶ್ ಮತ್ತು PTA ಸದಸ್ಯರು, ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲೆ ಸಿ.ಚೈತನ್ಯರವರು ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿಯರಾದ ಯಶ್ಮಿತಾ ಧನ್ಯವಾದವಿತ್ತರು ಮತ್ತು ದಿವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.