

ಮುಂಡಾಜೆ: ಮುಂಡಾಜೆಯ ಕಾರ್ಗಿಲ್ ವನದಲ್ಲಿ ಜುಲೈ 25ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.
ತಾಲೂಕಿನ ಮಾಜಿ ಸೈನಿಕ ಸಂಘದ ಮೇಜರ್ ಜನರಲ್ ಎಮ್.ವಿ ಭಟ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಜಿರೆ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕ್ರೀಡಾ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗಿಡ ನೆಟ್ಟು ಕಾರ್ಗಿಲ್ ವನದ ರೂವಾರಿ ಸಚಿನ್ ಭಿಡೆ ಸ್ವಾಗತಿಸಿ ಅನಿಸಿಕೆ ವ್ಯಕ್ತಪಡಿಸಿದರು.
ಮಾಜಿ ಸೈನಿಕ ಜಗನ್ನಾಥ ಶೆಟ್ಟಿ ವಂದಿಸಿದರು.ಈ ಸಂದರ್ಭದಲ್ಲಿ ಲತಾ.ಜಿ ಭಿಡೆ, ಮೇ.ಜೇ.ಎಂ.ವಿ.ಭಟ್, ಗೋಪಾಲಕೃಷ್ಣ, ಶ್ರೀಕಾಂತ ಗೋರೆ, ಜಗನ್ನಾಥ,ವಿಕ್ಬರ್ ಕ್ರಾಸ, ರಾಮನಾಥ, ವಾಲ್ಬರ್, ಜಗದೀಶ್ ಚಂದ್ರ, ಸುರೇಶ್ ಗೌಡ ಉಪಸ್ಥಿತರಿದ್ದರು.