ಉಜಿರೆ: ಸೂರ್ಯ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ ತಪ್ಪಿದ ಭಾರೀ ಅನಾಹುತ

0

ಉಜಿರೆ: ಗ್ರಾಮದ ಸೂರ್ಯ ಕಾಂಕ್ರೀಟ್ ರಸ್ತೆ ಹಾದು ಹೋಗುವ ನಡಿಬೆಟ್ಟು ಎಂಬಲ್ಲಿ ಜು.25ರಂದು ರಾತ್ರಿ ಸುರಿದ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ತು ಕಂಬ ಮತ್ತು ಮರ ಬಿದ್ದ ಘಟನೆ ನಡೆದಿದೆ.

ಅಲ್ಲಿಯೇ ಸಮೀಪದ ಬಾಲಕೃಷ್ಣ ಗೌಡ ಇವರ ಮನೆಯ ತೋಟಕ್ಕೆ ಬೃಹತ್ ಗಾತ್ರದ ಮರ ಬಿದ್ದು ತೋಟಕ್ಕೆ ಹಾನಿ ಉಂಟಾಗಿದೆ.

ರಸ್ತೆಗೆ ಬಿದ್ದ ವಿದ್ಯುತ್ತು ಕಂಬದ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ವಾಹನ ಸವಾರರು ಬದಲಿ ರಸ್ತೆಯ ಮೂಲಕ ಹೋಗಲು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here