ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

0

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲೈ 13ರಂದು ಶಾಲಾ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರ ವಂ.ಫಾ ಕ್ಲಿಫರ್ಡ್ ಪಿಂಟೋರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಪಲ್ಲವಿ ಗತಸಭೆಯ ವರದಿಯನ್ನು ವಾಚಿಸಿದರು. ಶೈಕ್ಷಣಿಕ ಚಿಂತಕ, ಉತ್ತಮ ವಾಗ್ಮಿ, ಕನ್ನಡದ ಉತ್ತಮ ಸಾಹಿತಿ, ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಂತಹ ಹಾಗೂ ಪ್ರಸ್ತುತ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅರವಿಂದ ಚೊಕ್ಕಾಡಿಯವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.

ಶಿಕ್ಷಕರು, ಪೋಷಕರು ಮತ್ತು ಶಾಲೆಯ ಮಧ್ಯೆ ಉತ್ತಮ ಸ್ಪಂದನೆ ಇರಬೇಕು. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳನ್ನು ನೈತಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸದೃಢಗೊಳಿಸಬೇಕೆಂದು ಕಿವಿಮಾತು ನೀಡಿದರು. ಶಾಲಾ ಸಂಚಾಲಕ ಅತೀ ವಂ.ಫಾ.ವಾಲ್ಟರ್ ಡಿಮೆಲ್ಲೋ ರವರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರು ಮತ್ತು ಪೋಷಕರು ಕೈಜೋಡಿಸಬೇಕೆಂದು ನುಡಿದು ಶುಭ ಹಾರೈಸಿದರು.

ಶಾಲೆಗೆ ನೂತನವಾಗಿ ನೇಮಕಗೊಂಡ ಸಹಶಿಕ್ಷಕಿಯರಾದ ಶ್ರೀಲತಾ, ಲವೀನಾ ಹಾಗೂ ಮಮತಾರನ್ನು ಸ್ವಾಗತಿಸಲಾಯಿತು. ಎ‌ಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ವಿಯೋನ ರೆಗೋ, ಜಾನಿಸ್ ವಿನೀಶಾ ಡಿಸೋಜ, ನಿಜಾ ಕುಲಾಲ್ ಇವರ ಜೊತೆಗೆ ಪೋಷಕರನ್ನು ಗೌರವಿಸಲಾಯಿತು.

ಕಳೆದ ಶೈಕ್ಷಣಿಕ ವರ್ಷದಲ್ಲಿ ನೂರು ಶೇಕಡ ಹಾಜರಾತಿಯನ್ನು ಹೊಂದಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪೋಷಕರು ಶಾಲೆಯ ಕುರಿತು ತಮ್ಮ ಸಲಹೆ ಸೂಚನೆಗಳನ್ನು ಹಂಚಿಕೊಂಡರು. ಸಹ ಶಿಕ್ಷಕಿಯರಾದ ಎಲ್ವಿಟಾ ಪಾಯ್ಸ್ ಸಂಪನ್ಮೂಲ ವ್ಯಕ್ತಿಯವರನ್ನು ಪರಿಚಯಿಸಿದರು. ಜೊನಿಟ ಕೊರೆಯ ಸ್ವಾಗತಿಸಿ, ಅಖಿದಾ ಬಾನು ವಂದಿಸಿದರು. ಸುಮಿತ್ರ ಬಿ ಎಲ್ ಕಾರ್ಯಕ್ರಮ ನಿರ್ವಹಿಸಿದರು.

p>

LEAVE A REPLY

Please enter your comment!
Please enter your name here