ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಇಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಎಂ. ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಶಶಿಶೇಖರ್ ಎನ್ ಕಾಕತ್ಕರ್ ಇವರು ಮಾತನಾಡುತ್ತಾ ಶಿಷ್ಯರನ್ನು ಅಂಧಕಾರದಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ ತರುವವನೇ ನಿಜವಾದ ಗುರು. ಗುರು ಅಥವಾ ಶಿಕ್ಷಕ ಎಂಬುದು ಅತ್ಯಂತ ಪವಿತ್ರವಾದ ವೃತ್ತ. ಗುರುವು ಪಠ್ಯದ ಜೊತೆಗೆ ಸ್ಥೈರ್ಯ, ಧೈರ್ಯ, ನಿಷ್ಠೆ, ಶ್ರದ್ಧೆ, ಸತ್ಯ, ಧರ್ಮಗಳ ಬೋಧನೆಯೊಂದಿಗೆ ಶಿಷ್ಯರ ಭವಿಷ್ಯದ ರೂವಾರಿಯಾಗಬೇಕು ಎಂದು ಗುರುಪೂರ್ಣಿಮಾದ ಮಹತ್ವವನ್ನು ತಿಳಿಸಿದರು.
ಭಾರತವು ಗುರುಪರಂಪರೆಯನ್ನು ಹೊಂದಿರುವ ರಾಷ್ಟ್ರ, ಗುರು ಎಂಬುವುದು ಅತ್ಯಂತ ಅರ್ಥಪೂರ್ಣ ವೃತ್ತಿ. ಗುರು ಎಂಬುವವನು ಶಿಕ್ಷಕರಿಗೆ ಅಥವಾ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಹಾಗಾದರೆ ಮಾತ್ರ ಗುರುಪೂರ್ಣಿಮೆ ದಿನವು ಅರ್ಥಪೂರ್ಣವಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಆಲ್ಬರ್ಟ್ ಸಲ್ಡಾನ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ತಿರುಮಲೇಶ್ ರಾವ್ ಎನ್ ಕೆ, ಅನುಷಾ ಡಿ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಹಾಗೂ ದ್ವಿತೀಯ ಬಿ.ಇಡಿ. ಯ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಆದ್ಯ ಅತಿಥಿಗಳನ್ನು ಪರಿಚಯಿಸಿ, ಪ್ರೀತಿ ಕಾರ್ಯಕ್ರಮವನ್ನು ನಿರೂಪಿಸಿದರು.