ವೇಣೂರು: ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

0

ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ವೇಣೂರು ವಲಯದಲ್ಲಿ ನೂತನವಾಗಿ ಆಯ್ಕೆಯಾದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರವನ್ನು ವೇಣೂರು ವಲಯದಲ್ಲಿ ಆಯೋಜಿಸಲಾಯಿತು.

ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಪದಾಧಿಕಾರಿಗಳ ಪಾತ್ರದ ಕುರಿತು ತರಬೇತಿಯನ್ನ ನೀಡಿದರು.ನಾಯಕತ್ವವನ್ನು ವಹಿಸಿಕೊಂಡವರು ಸಮಾಜಮುಖಿಯಾಗಿ ಕೆಲಸ ಮಾಡಬೇಕು, ಪದಾಧಿಕಾರಿಗಳು ಎಲೆಕ್ಷನ್ ಮೂಲಕ ಆಯ್ಕೆಯಾದವರು.

ಅಲ್ಲ ಬದಲಾಗಿ ಜನರ ಮೂಲಕ ಸೆಲೆಕ್ಷನ್ ಆಯ್ಕೆಯಾಗಿದ್ದಾರೆ ಸ್ವ ಇಚ್ಛೆಯಿಂದ ಆಯ್ಕೆಯಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ನಿಯಮದಡಿಯಲ್ಲಿ ಜನರಿಗೆ ಸೇವೆ ನೀಡಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ದೇಶಕ ಸುರೇಶ್ ಮೊಯ್ಲಿ ಯವರು ಹೇಳಿದರು.ಅವರು ನಾಯಕತ್ವ ಹಾಗೂ ಸಂವಹನ ಕುರಿತಾಗಿ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು.

ನಿಕಟ ಪೂರ್ವ ವಲಯ ಅಧ್ಯಕ್ಷ ಜಯಶಂಕರ್ ಹೆಗ್ಡೆ ತರಬೇತಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.ಒಕ್ಕೂಟ ಸಭೆ ನಡೆಸುವ ವಿಧಾನ ಹಾಗು ಜವಾಬ್ದಾರಿಗಳ ಕುರಿತು ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿಯವರು ತರಬೇತಿ ನೀಡಿದರು.

ವೇಣೂರು ವಲಯದ ನೂತನ ಒಕ್ಕೂಟದ ವಲಯ ಅಧ್ಯಕ್ಷ ಬಜಿರೆ ಒಕ್ಕೂಟದ ಅಧ್ಯಕ್ಷ ಗಿರೀಶ್ ರವರು ಆಯ್ಕೆಯಾದರು.ವಲಯ ಮೇಲ್ವಿಚಾರಕ ಶಾಲಿನಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಮುಡುಕೊಡಿ ಸೇವಾಪ್ರತಿನಿಧಿ ಸುನೀತ ಸ್ವಾಗತಿಸಿದರು.

LEAVE A REPLY

Please enter your comment!
Please enter your name here