ಹದಗೆಟ್ಟ ರಾಜ್ಯದ ಆರ್ಥಿಕತೆ ತುಂಬಲು ಕುಮ್ಕಿ ಭೂಮಿಯ ಕಬಳಿಕೆಗೆ ಸರಕಾರದ ಹುನ್ನಾರ- ಬಿಜೆಪಿ ರೈತ ಮೋರ್ಚಾ ಆಕ್ರೋಶ

0

ಬೆಳ್ತಂಗಡಿ: ಚುನಾವಣಾ ಸಂದರ್ಭದಲ್ಲಿ ಅಧಿಕಾರಕ್ಕೇರಲು ಮತದಾರರಿಗೆ ಪೂರೈಸಲಾಗದಂತಹ ಆಮಿಷವನ್ನು ಪ್ರಣಾಳಿಕೆಯಲ್ಲಿ ಗ್ಯಾರಂಟಿಯನ್ನು ಘೋಷಿಸಿ ಈಗ ಅದನ್ನು ಪೂರೈಸಲಾಗದೆ ಅಸಾಧ್ಯವಾಗಿ ಇತ್ತ ಮೂಲ ಸೌಕರ್ಯಗಳಿಗೂ ಅನುದಾನ ಘೋಷಿಸದೆ ಅದಕ್ಕೆ ಅಡ್ಡ ಕತ್ತರಿಯಲ್ಲಿ ಸಿಲುಕಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹದೆಗೆಟ್ಟ ರಾಜ್ಯದ ಬೊಕ್ಕಸವನ್ನು ಭರ್ತಿ ಮಾಡಲು ಬಡ ರೈತರ ಕುಮ್ಕಿ ಭೂಮಿ ಕಬಳಿಕೆಗೆ ಹುನ್ನಾರ ನಡೆಸುತ್ತಿದ್ದು ಇಂತಹ ದುಸ್ಸಾಹಸಕ್ಕೆ ಮುಂದಾಗದಂತೆ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ರೈತ ಮೋರ್ಚಾ ತೀವ್ರವಾದ ಎಚ್ಚರಿಕೆ ನೀಡುತ್ತದೆ.

ಕುಮ್ಕಿ ಹಕ್ಕನ್ನು ರೈತರ ಹಕ್ಕೆಂದು ಅಂದಿನ ಮದರಾಸು ಪ್ರಾಂತ್ಯ ಮಾನ್ಯತೆ ಮಾಡಿ ಆ ಷರತ್ತಿನ್ವಯ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೈಸೂರು ರಾಜ್ಯದಲ್ಲಿ ವಿಲೀನವಾಗಲು ಒಪ್ಪಿಗೆ ನೀಡಿತು ತದನಂತರ ಈ ಕಾಯ್ದೆಯನ್ನು ಹೈಕೋರ್ಟ್ ಸುಪ್ರೀಂಕೋರ್ಟ್‌ಗಳು ಮಾನ್ಯ ಮಾಡಿದ್ದು ಕುಮ್ಕಿ ಭೂಮಿಯ ರೈತರ ಮೂಲಭೂತ ಹಕ್ಕಾಗಿರುತ್ತದೆ. ತನ್ನ ಗೊತ್ತು ಗುರಿ ಇಲ್ಲದೆ ವೈಜ್ಞಾನಿಕ ಹಳಿತಪ್ಪಿದ ಆರ್ಥಿಕ ನೀತಿಯಿಂದ ಬರಿದಾದ ಬೊಕ್ಕಸ ಭರ್ತಿಗೆ ಕಾಂಗ್ರೆಸ್ ಸರಕಾರ ರೈತರ ಹಕ್ಕಾದ ಕುಮ್ಕಿ ಭೂಮಿಯನ್ನು ಲೀಸ್ ಆಧಾರದಲ್ಲಿ ಗುತ್ತಿಗೆ ನೀಡ ಹೊರಟಿರುವುದು ಅನ್ನದಾತರಿಗೆ ಬಗೆದ ದ್ರೋಹವಾಗಿದೆ. ಈ ಯೋಚನೆಯನ್ನು ಸರಕಾರ ತಕ್ಷಣ ಕೈ ಬಿಡಬೇಕು ಇಲ್ಲದಿದ್ದರೆ ಬಿಜೆಪಿ ರೈತ ಮೋರ್ಚಾ ಉಗ್ರ ಹೋರಾಟ ನಡೆಸಲಿರುವುದೆಯೆಂದು ಗಣೇಶ್ ಗೌಡ ನಾವೂರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಗಣೇಶ್ ನಾವೂರು ರೈತ ಮೋರ್ಚಾ ಜಿಲ್ಲಾಧ್ಯಕ್ಷರು 9980887524

LEAVE A REPLY

Please enter your comment!
Please enter your name here