ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ಅತ್ಯಾಧುನಿಕ ಸಿ-ಆರ್ಮ್ ಯಂತ್ರಕ್ಕೆ ಚಾಲನೆ

0

ಉಜಿರೆ: ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22.5 ಲಕ್ಷ ರೂಪಾಯಿ ಮೌಲ್ಯದ ಹೊಸ ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರವನ್ನು ಜು.17ರಂದು ಅಳವಡಿಸಿ ಚಾಲನೆ ನೀಡಲಾಯಿತು.

ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರದ ಬಗ್ಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಮಾತನಾಡಿ ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರ ಎಕ್ಸ್-ರೇ ತಂತ್ರಜ್ಞಾನವನ್ನು ಆಧರಿಸಿದ ಸುಧಾರಿತ ವೈದ್ಯಕೀಯ ಚಿತ್ರಣವನ್ನು ಕೊಡಬಲ್ಲ ಸಾಧನವಾಗಿದೆ. ಮಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುವ ಈ ಯಂತ್ರ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಾರಿಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.

ಈ ಯಂತ್ರ ಶಕ್ತಿಯುತ ಅತ್ಯಾಧುನಿಕ ಇಮೇಜಿಂಗ್, ನವೀನ ಟಚ್ ಮತ್ತು ಪ್ಲೇ ತಂತ್ರಜ್ಞಾನ ಹೊಂದಿದೆ. ಇದರಲ್ಲಿರುವ ಹೊಸ ತಂತ್ರಜ್ಞಾನದೊಂದಿಗೆ ದೃಶ್ಯಚಿತ್ರಗಳು ಹೆಚ್ಚು ವಿಕಸನಗೊಳ್ಳುತ್ತಿರುವ ದೃಶ್ಯಗಳನ್ನು ಕೊಡಬಲ್ಲ ಸಾಧನವಾಗಿದ್ದು, ಸೂಕ್ತವಾದ ವೈದ್ಯಕೀಯ ಫಲಿತಾಂಶಗಳ ಸಾಧನೆಗೆ ನೆರವಾಗುತ್ತದೆ.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ೪ ಮಂದಿ ಮುಳೆ ಶಸ್ತ್ರಚಿಕಿತ್ಸಾ ತಜ್ಞರಿದ್ದು, ಇಲ್ಲಿ ಈಗಾಗಲೇ ಹಲವಾರು ಟೋಟಲ್ ನೀ ರಿಪ್ಲೇಸ್‌ಮೆಂಟ್ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್ ಹಾಗೂ ಮೂಳೆ ಮತ್ತು ಕೀಲುಗಳ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಪ್ರಸ್ತುತ ಅಳವಡಿಸಿರುವ ಈ ಯಂತ್ರ ಸೊಂಟ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಗ್ಯಾಸ್ಟ್ರೋ ಕರುಳಿನ ಚಿಕಿತ್ಸೆ, ಎಂಡೋಸ್ಕೋಪಿಕ್, ಮೂತ್ರಶಾಸ್ತ್ರ, ನರಸಂಬಂಧಿ ಖಾಯಿಲೆ, ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಈ ಯಂತ್ರ ಅತೀ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.

LEAVE A REPLY

Please enter your comment!
Please enter your name here