ಬೆಳ್ತಂಗಡಿ: ಶ್ರೀ ಗುರುದೇವ ವಿವಿದೋದ್ಧೇಶ ಸಹಕಾರ ಸಂಘದ 2023-24ನೇ ಸಾಲಿನ 17ನೇ ವಾರ್ಷಿಕ ಮಹಾಸಭೆ ಜು.14ರಂದು ಸಂಘದ ನೂತನ ವಾಣಿಜ್ಯ ಸಂಕೀರ್ಣ ಶ್ರೀ ಸಾನಿಧ್ಯದಲ್ಲಿ ಸಂಘದ ಉಪಾಧ್ಯಕ್ಷ ಭಗೀರಥ ಜಿ. ಇವರ ಅಧ್ಯಕ್ಷತೆಯಲ್ಲಿ ಜರಗಿತು.
2023- 24ನೇ ಸಾಲಿನಲ್ಲಿ ರೂ. 1200 ಕೋಟಿ ವ್ಯವಹಾರ ನಡೆಸಿ ನಿವ್ವಳ ರೂ. 3,84,01,303/ ಲಾಭ ಗಳಿಸಿದೆ.ಸಂಘದ ವಿಶೇಷಾಧಿಕಾರಿ ಯಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಸ್ತಾವಿಕವಾಗಿ ಮಾತನಾಡಿ ಮಹಾ ಸಭೆಯ ವಿವರ ಮಂಡಿಸಿದರು.
ನಿರ್ದೇಶಕ ಡಾ. ಡಾ. ರಾಜಾರಾಮ ಕೆ. ಬಿ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವಥ್ ಕುಮಾರ್ ಸಾಧನೆ ಗೈದ ಶಾಖೆಯ, ಸನ್ಮಾನದ ವಿವರ ನೀಡಿದರು.
ನಿರ್ದೇಶಕರುಗಳಾದ ಸುಜಿತಾ ವಿ. ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ. ಪಿ. ದಿವಾಕರ, ಜಗದೀಶ್ಚಂದ್ರ ಡಿ. ಕೆ., ಚಂದ್ರಶೇಖರ್, ಎಚ್. ಧರ್ಣಪ್ಪ ಪೂಜಾರಿ, ಗಂಗಾಧರ ಮಿತ್ತಮಾರು, ಜಯವಿಕ್ರಮ್ ಪಿ., ಧರಣೇಂದ ಕುಮಾರ್, ಆನಂದ ಪೂಜಾರಿ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಅಗಲಿದ ಮಾಜಿ ಶಾಸಕ ಸಂಘದ ಪ್ರಾರಂಭದ ಮುಖ್ಯ ಪ್ರವರ್ತಕ ಕೆ.ವಸಂತ ಬಂಗೇರ, ನಿರ್ದೇಶಕ ಶೇಖರ ಬಂಗೇರ, ಸಿಬ್ಬಂದಿ ಲತನ್ ಇವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ವ್ಯವಹಾರದಲ್ಲಿ ಸಾಧನೆಗೈದ ಶಾಖೆಗಳನ್ನು, ಹೆಚ್ಚು ಮೊತ್ತ ದೈನಿಕ ಠೇವಣಿ ಸಂಗ್ರಹಕರನ್ನು ವೈಯಕ್ತಿಕ ಸಾಧಕ ಸಿಬ್ಬಂದಿಗಳನ್ನು ಗೌರವಿಸಲಾಯಿತು.