ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೆಳ್ತಂಗಡಿ ತಾಲೂಕು, ಪ್ರಗತಿ ಬಂದು ಜ್ಞಾನ-ವಿಕಾಸ ಸ್ವ-ಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ವಲಯ ಮಟ್ಟದ ಪ್ರಗತಿ-ಬಂದು ಒಕ್ಕೂಟಗಳ ಪದಗ್ರಹಣ ಸಮಾರಂಭ ಹಾಗೂ ಸಾಧನಾ ಸಮಾವೇಶ ಜುಲೈ 7ರಂದು ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ನಡೆಯಿತು.
ಬೆಳ್ತಂಗಡಿ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕರಾದ ವಿಜಿ ಸುಬ್ಬಾಪುರ ಮಠ್ ಉದ್ಘಾಟಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನನ್ನ ಊರಿನಲ್ಲಿಯೂ ಕೂಡ ಅನೇಕ ಅಭಿವೃದ್ಧಿ ಕಾರ್ಯಕ್ರಮ ಮಧ್ಯವರ್ಜನ ಶಿಬಿರ,ಕೆರೆಗಳ ಪುನಶ್ಚೇತನ,ಸ್ವ-ಸಹಾಯ ಸಂಘದ ಮೂಲಕ ಮಹಿಳೆಯರ ಸಬಲೀಕರಣ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಯು ಶ್ರಮಿಸುತ್ತಿದೆ ನನ್ನ ಸಹಕಾರವು ಯೋಜನೆಗೆ ನಿರಂತರವಾಗಿದೆ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಕೇಂದ್ರ ಪ್ರಗತಿಬಂದು ಒಕ್ಕೂಟ ಬೆಳ್ತಂಗಡಿಯ ಅಧ್ಯಕ್ಷರಾದ ಸೀತಾರಾಮ್ ಆರ್ ಮಾತನಾಡುತ್ತಾ ಪ್ರತಿಯೊಬ್ಬ ಸದಸ್ಯರು ಕೂಡ ಯೋಜನೆಯು ಸುಮಾರು 40 ವರ್ಷದ ಕಾಲ ನಿರಂತರವಾಗಿ ನಮ್ಮ ಗ್ರಾಮದ ಪ್ರತಿಯೊಬ್ಬರ ಅಭಿವೃದ್ಧಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕಾರವನ್ನು ಯೋಜನೆಯು ನೀಡಿದ ಕಾರಣ ಅಭಿವೃದ್ಧಿಗೆ ಇಂದು ದಾರಿಯಾಗಿದೆ, ಯಾವುದೇ ಅಪಪ್ರಚಾರವನ್ನು ಯಾವುದೇ ವ್ಯಕ್ತಿ ಮಾಡಿದರು ಕೂಡ ಅದರ ಸತ್ಯತೆ ಏನೆಂಬುದನ್ನು ನಾವು ಅರಿತುಕೊಂಡು ಯೋಜನೆಗೆ ಸಹಕಾರವನ್ನು ನೀಡಬೇಕಾಗಿದೆ, ಮುಂದಿನ ತಿಂಗಳು ನಡೆಯುವ ಕೆಸರಿನ ಆಟಕ್ಕು ಕೂಡ ತಮ್ಮೆಲ್ಲರ ಸಹಕಾರ ಬೇಕೆಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕರಾವಳಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿ ಹುಟ್ಟಿನಿಂದ ಸಾವಿನವರೆಗೆ ಬರುವ ಸಾಕಷ್ಟು ಸಂಕಷ್ಟಗಳಿಗೆ ಸಹಕಾರ ನೀಡುವುದು. ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಒದಗಿಸುವುದು.ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಮೂಲಕ ಮೂಲಭೂತ ಸೌಕರ್ಯಗಳಿಗೆ ಅನುದಾನವನ್ನು ಒದಗಿಸಿ ಅಭಿವೃದ್ಧಿ ಮಾಡುತ್ತಿರುವ ಯೋಜನೆಯ ಆಶಯ 40 ವರ್ಷಗಳ ಹಿಂದೆ ತಾಲೂಕಿನಲ್ಲಿ ಇದ್ದ ಕಡು ಬಡತನವನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 1982ರಲ್ಲಿ ಗ್ರಾಮದಲ್ಲಿ ಯೋಜನೆಯನ್ನು ಜಾರಿಗೆ ತಂದರು ಇದರ ಮುಖ್ಯ-ಉದ್ದೇಶ ಸಾಲ ನೀಡುವುದಲ್ಲ ಬದಲಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬುದೇ ಆಗಿದೆ ಎಂದರು
ಬೆಳ್ತಂಗಡಿ ಹಿರಿಯ ವಕೀಲರಾದ ಧನಂಜಯ ರಾವ್ ಮಾತನಾಡಿ ಸ್ವ-ಸಹಾಯ ಸಂಘದ ಮಹಿಳೆಯರು ಸಾಮಾಜಿಕವಾಗಿ ಆರ್ಥಿಕ ಶಕ್ತಿಯಾಗಿ ಸಮಾಜವನ್ನು ಕಟ್ಟುವ ಕೆಲಸ ಮಹಿಳೆಯರು ಮಾಡುತ್ತಿದ್ದಾರೆ,ಕೃಷಿಕರಿಗೆ ಮಾಹಿತಿ ನೀಡಿ ಕೃಷಿಗೆ ಭದ್ರತೆಯನ್ನು ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ,ಇಂದು ನಾನು ಕೂಡ ಭತ್ತ ಕೃಷಿ ಮಾಡುವಲ್ಲಿ ಯೋಜನೆಯ ಕೃಷಿ ಅಧಿಕಾರಿ ನನ್ನ ಮನೆಗೆ ಬಂದು ಬೀಜೋಪಚಾರ ಯಂತ್ರದ ಮೂಲಕ ನಾಟಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಹೇಗೆ ಬರಬಹುದು ಎನ್ನುವ ತಾಂತ್ರಿಕ ಮಾಹಿತಿಯನ್ನು ಕೂಡ ಒದಗಿಸಿದ್ದಾರೆ ಹೀಗೆ ಯೋಜನೆ ಪ್ರತಿಯೊಬ್ಬನ ಮನೆಗೆ ಸೇವೆಯನ್ನು ನೀಡುತ್ತಿದೆ ಇದು ನಿಜಕ್ಕೂ ಸ್ಲಗನಿಯ ಎಂದರು.
ಈ ಸಂದರ್ಭ ವಲಯ ಮಟ್ಟದ 10 ವಲಯದ ಪದಗ್ರಹಣ ಕಾರ್ಯಕ್ರಮ, ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ, ಜಲಮಂಗಲ ಕಾರ್ಯಕ್ರಮದ ಅಡಿಯಲ್ಲಿ ವೀಲ್ ಚಯರ್ ಹಾಗೂ ಹ್ಯಾಂಡ್ ಸ್ಟಿಕ್ ವಿತರಣೆ, ವಲಯದ 10 ಕಾರ್ಯಕ್ಷೇತ್ರದಿಂದ ಮಾದರಿ ಸಂಘದ ಗುರುತಿಸುವಿಕೆ, ವಲಯದ 10 ಕಾರ್ಯಕ್ಷೇತ್ರದಿಂದ ತನ್ನ ಅಭಿವೃದ್ಧಿಗಾಗಿ ಅತಿ ಹೆಚ್ಚು ಆರ್ಥಿಕ ವ್ಯವಹಾರಗಳನ್ನು ಸಂಘದಲ್ಲಿ ಮಾಡಿದ ಸಂಘದ ಗುರುತಿಸುವಿಕೆ, ಹಿರಿಯ ಸದಸ್ಯರ ಗುರುತಿಸುವಿಕೆ, ಅಭಿವೃದ್ಧಿ ಹೊಂದಿದ ಸದಸ್ಯರ ಗುರುತಿಸುವಿಕೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ವೇದಿಕೆಯಲ್ಲಿ ನೆರವೇರಿತು.
ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಎಂ ಕಾಸಿಂ ಮಲ್ಲಿಗೆ ಮನೆ, ಮೆಲಂತಬೆಟ್ಟು ಶ್ರೀ ಭಗವತಿ ಅಮ್ಮ ದೇವಸ್ಥಾನದ ಧರ್ಮದರ್ಶಿಗಳಾದ ಯೋಗೇಶ್ ಪೂಜಾರಿ, ಬೆಳ್ತಂಗಡಿ ಭಜನಾ ಪರಿಷತ್ ತಾಲೂಕು ಕಾರ್ಯದರ್ಶಿ ಚಂದ್ರಶೇಖರ್ ಸಾಲಿಯಾನ್, ಬೆಳ್ತಂಗಡಿ ವಲಯದ ಯೋಜನಾಧಿಕಾರಿ ಸುರೇಂದ್ರ, ಒಕ್ಕೂಟದ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ, ಪ್ರಕಾಶ್ ಮೆರ್ಲ, ಜನಾರ್ದನ, ಸತೀಶ, ಶ್ರೀಕೇಶ್ ಕೊಟ್ಯಾಯನ್, ಕೃಷ್ಣಪ್ಪ, ಜಾರಪ್ಪ ಗೌಡ, ಚರಣ್ ಕುಮಾರ್, ಮೇಲ್ವಿಚಾರಕರಾದ ಹರೀಶ್ ಸಾಧನೆಯ ವರದಿಯನ್ನು ಮಂಡಿಸಿದರು, ಸೇವಾಪ್ರತಿನಿಧಿಗಳು ಉಪಸ್ಥಿತಿದಿದ್ದರು.
ಕೃಷಿ ಅಧಿಕಾರಿ ರಾಮ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿ, ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಸ್ವಾಗತಿಸಿ, ಒಕ್ಕೂಟದ ಅಧ್ಯಕ್ಷರಾದ ಸತೀಶ್ ವಂದಿಸಿದರು.ವಲಯದ 10 ಒಕ್ಕೂಟದ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.