ಉಜಿರೆ: ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಮಂತ್ರಿಮಂಡಲ ರಚನೆ, ವಿವಿಧ ಸಂಘಗಳ ಮತ್ತು ಯಕ್ಷಗಾನ ತರಬೇತಿ ಉದ್ಘಾಟನೆ ಜು.8ರಂದು ಶ್ರೀ ಧ.ಮಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತಾಡಿ ವಿದ್ಯಾರ್ಥಿಗಳಿಗೆ ಅವಕಾಶ ಇದೆ ಅದನ್ನು ಸದುಪಯೋಗ ಹಾಗೂ ಬಳಕೆ ಅಗತ್ಯ ಅಗಬೇಕು.ಮಕ್ಕಳು ಸಿಕ್ಕಿದನ್ನು ಹಕ್ಕಿಯಂತೆ ಹೆಕ್ಕಿ ತಿನ್ನಬೇಕು ಎಂದರು.
ಯಕ್ಷಗಾನ ತರಬೇತುದಾರರಾದ ಲಕ್ಷಣ ಗೌಡ ಅವರು ಯಕ್ಷಗಾನದ ಮಹತ್ವದ ಬಗ್ಗೆ ತಿಳಿಸಿ ಯಕ್ಷಗಾನದ ಕೆಲವು ತುಣುಕುಗಳನ್ನು ಹೇಳಿದರು.ರತ್ನಮಾನಸದ ನಿಲಯ ಪಾಲಕ ಯತೀಶ್ ಕುಮಾರ್ ಸಂಘದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ವಲಯ ಸಂಪನ್ಮೂಲಧಿಕಾರಿ ಪ್ರತಿಮಾ ವೆಂಕಟೇಶ್ ನೂತನ ಶಾಲಾ ಮಂತ್ರಿ ಮಂಡಲದ ಸದಸ್ಯರಿಗೆ ಶುಭ ಹಾರೈಸಿದರು.2024-25ನೇ ಸಾಲಿನ ಶಾಲಾ ಸರಕಾರದ ಚುನಾವಣೆ ನಡೆಯಿತು. ಒಟ್ಟು 12 ವಿದ್ಯಾರ್ಥಿಗಳು ಚುನಾವಣಾ ಕಣದಲ್ಲಿ ಇದ್ದರು ಮುಖ್ಯಮಂತ್ರಿಯಾಗಿ ಶಮನ್, ಉಪ ಮುಖ್ಯಮಂತ್ರಿಯಾಗಿ ಪ್ರವೀಣ್, ಉಪಪೋನಾಯಕನಾಗಿ ಸಮ್ಯಾಕ್ ಆಯ್ಕೆಯಾಗಿರುತ್ತಾರೆ.
ಮುಖ್ಯೋಪಾಧ್ಯಯ ಸುರೇಶ್.ಕೆ ನೂತನ ಮಂತ್ರಿ ಮಂಡಲದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.ಸಾಹಿತ್ಯ ಸಂಘ, ಕಲಾಸಂಘ, ಪರಿಸರ ಸಂಘ, ವಿಜ್ಞಾನ, ಗಣಿತ ಸಂಘ, ಕ್ರೀಡಾ ಸಂಘ, ಸಾಂಸ್ಕೃತಿಕ ಸಂಘ, ಮಕ್ಕಳು ಹಕ್ಕು ಸಂಘ ಇವುಗಳ ಪದಾಧಿಕಾರಿಗಳು ವಾರ್ಷಿಕ ವರದಿಯನ್ನು ವಾಚಿಸಿದರು.ಎಲ್ಲಾ ಸಂಘದ ಮಹತ್ವವದ ಬಗ್ಗೆ ಶಿಕ್ಷಕ ವಿಶ್ವನಾಥ ವಿವರಿಸಿದರು.ಶಿಕ್ಷಕರಾದ ಸಂಗೀತಾ ಸ್ವಾಗತಿಸಿ, ರಂಜಿತ್ ವಂದಿಸಿದರು. ಜ್ಞಾನೇಶ್ ಕಾರ್ಯಕ್ರಮ ನಿರೂಪಿಸಿದರು.