ಶಾಲಾ ಮಕ್ಕಳ ರಕ್ಷಣೆಗೆ ಬೇಕಿದೆ ಮಚ್ಚಿನಕ್ಕೊಂದು ಬ್ಯಾರಿ ಕೇಡ್

0

ಮಚ್ಚಿನ: ರಸ್ತೆಯ ಬದಿಯಲ್ಲಿಯೇ ಸರಕಾರಿ ಉನ್ನತೀಕರಿಸಿದ ಶಾಲೆ, ಸರಕಾರಿ ಪ್ರೌಢಶಾಲೆ, ಅಂಗನವಾಡಿ ಕೇಂದ್ರ ಹಾಗೂ ನೂರಾರು ಮಕ್ಕಳು, ಸಾರ್ವಜನಿಕರು ಅಡ್ಡಾಡುವ ಸ್ಥಳ ವಾಗಿದ್ದು, ಈ ಸ್ಥಳದಲ್ಲಿ ಶಾಲೆ ಬಿಡುವ ಸಮಯದಲ್ಲಿ ಮಕ್ಕಳು ರಸ್ತೆದಾಟಲು ತೀರಾ ಕಷ್ಟ ಪಡುವಂತಾಗಿದೆ.

ಮಡಂತ್ಯಾರು-ಉಪ್ಪಿನಂಗಡಿ ಕಡೆಗೆ ಅತಿ ವೇಗದಲ್ಲಿ ಸಂಚರಿಸುವ ವಾಹನಗಳಿಂದ ರಸ್ತೆ ದಾಟುವುದೆ ಭಯದ ವಾತಾವರಣವಾಗಿದೆ.

ರಸ್ತೆಯ ಬದಿಯಲ್ಲಿ ಶಾಲೆಯ ಯಾವುದೇ ಸೂಚನಾ ಫಲಕವು ಇಲ್ಲದೆ ಇರುವುದರಿಂದ ವಾಹನ ಚಾಲಕರಿಗೂ ಅರಿವಿಗೆ ಬರದಂತಾಗುತ್ತಿದೆ.

ಕಳೆದ ಒಂದು ಎರಡು ವರ್ಷಗಳ ಹಿಂದೆ ಇದೇ ವಿಷಯದ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಿಸಿದ ತಕ್ಷಣ ಸ್ಪಂದಿಸಿದ ಬಿಲ್ಲವ ಸಂಘ ಮಚ್ಚಿನ ಇದರ ವತಿಯಿಂದ ಉದ್ಧಾರ ಮನಸ್ಸಿನಿಂದ ಉಚಿತವಾಗಿ ಬ್ಯಾರಿಕೇಡ್ ಒದಗಿಸಿಕೊಟ್ಟರು.

ಆದರೆ ಅತಿ ವೇಗದದಲ್ಲಿ ಬರುವ ವಾಹನಗಳು ಡಿಕ್ಕಿ ಹೊಡೆದು ನಜ್ಜು ಗುಜ್ಜಾಗಿ ಇತ್ತೀಚೆಗೆ ಅದು ಮಾಯವಾಯಿತು.

ಶಾಲಾ ಪಕ್ಕದಲ್ಲಿ ರಸ್ತೆ ತಿರುವು ಇರುವುದರಿಂದ ವಾಹನಗಳು ಬರುವುದೇ ಕಾಣದಂತಾಗಿದೆ. ಶಾಲಾ ಮಕ್ಕಳ ರಕ್ಷಣೆಗಾಗಿ ದೊಡ್ಡ ಅನಾಹುತ ಸಂಭವಿಸುವ ಮುನ್ನ ಶಾಲಾ ಎಸ್ ಡಿ ಎಂ ಸಿ ಸಮಿತಿ, ಗ್ರಾಮ ಪಂಚಾಯಿತಿ ಪೋಲಿಸ್ ಇಲಾಖೆ ಗಮನಹರಿಸಿ ಬ್ಯಾರಿಕೇಡ್ ಅಳವಡಿಸುವಂತೆ ಸಾರ್ವಜನಿಕರ ಬೇಡಿಕೆಯಾಗಿದೆ.

✍️ ಹರ್ಷ ಬಳ್ಳಮಂಜ

p>

LEAVE A REPLY

Please enter your comment!
Please enter your name here