

ಬೆಳ್ತಂಗಡಿ: ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಸುಪುತ್ರ ಸುನ್ನಿ ಕುಟುಂಬದ ನೇತಾರ, ಸೈಯ್ಯದ್ ಕುಟುಂಬದ ಕುಡಿ, ಹಲವಾರು ಮೊಹಲ್ಲಾಗಳ ಖಾಝಿಗಳು, ಗೌರವಾದ್ಯಕ್ಷರೂ, ಆದ್ಯಾತ್ಮಿಕ ಗುರುಗಳೂ ಆಗಿರುವ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರು ನಮ್ಮೆಲ್ಲರನ್ನು ಅಗಲಿರುತ್ತಾರೆ ಎಂಬ ಆಘಾತಕಾರಿ ಸುದ್ದಿಯು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿರುತ್ತದೆ.
ಅಲ್ಲಾಹನು ಬಹುಮಾನ್ಯರಾದ ಇವರ ಪರಲೋಕ ಯಾತ್ರೆಯಲ್ಲಿ ಅವರ ಸಕಲ ಸತ್ಕರ್ಮಗಳನ್ನು ಸ್ವೀಕರಿಸಿ ಸ್ವರ್ಗೊದ್ಯಾನದಲ್ಲಿ ಉನ್ನತ ಸ್ಥಾನ ನೀಡಲಿ ಹಾಗೂ ಅವರ ಅಭಿಮಾನಿಗಳಿಗೆ, ಶಿಷ್ಯವೃಂದಕ್ಕೆ ಮತ್ತು ಬಂಧು ಬಳಗಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹನು ನೀಡಲಿ ಎಂದು ತಾಲೂಕು ಮುಸ್ಲಿಂ ಒಕ್ಕೂಟ ಬೆಳ್ತಂಗಡಿ ಇದರ ಅಧ್ಯಕ್ಷ ಬಿ.ಎ.ನಝೀರ್ ರವರು ಸಂತಾಪ ಸೂಚಿಸಿದರು.