ವೇಣೂರು: ಅತ್ರಾಡಿ ಖಾಝಿ ಶೇಖುನಾ ಅಬೂಬಕ್ಕರ್ ಮುಸ್ಲಿಯಾರ್ ಅನುಸ್ಮರಣೆ ಮತ್ತು ಇಸ್ಲಾಮಿನ ಮಾಧುರ್ಯ ಎಂಬ ವಿಷಯದ ಬಗ್ಗೆ ಕಾರ್ಯಕ್ರಮ ಎಸ್ ಕೆಎಸ್ ಎಸ್ ಎಸ್ ಎಫ್ ಪಡ್ಡಂದಡ್ಕ ಮತ್ತು ಪೆರಿಂಜೆ ಶಾಖೆ ಜಂಟಿ ಆಶ್ರಯದಲ್ಲಿ ಬಶೀರ್ ಕೆಪಿ ಪಡ್ಡಂದಡ್ಕ ಅಧ್ಯಕ್ಷತೆಯಲ್ಲಿ ಪಡ್ಡಂದಡ್ಕದಲ್ಲಿ ನಡೆಯಿತು.
ಮುಖ್ಯ ಅಥಿತಿಯಾಗಿ ಬಶೀರ್ ದಾರಿಮಿ ಹಾಗು ಪಡ್ಡಂದಡ್ಕ ಮಸೀದಿ ಖತೀಬ್ ಅಶ್ರಫ್ ಫೈಝಿ ಅರ್ಕಾನ ಆಗಮಿಸಿ ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಪಡ್ಡಂದಡ್ಕ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಹಾಗು ಇತ್ತೀಚಿಗೆ ಸರಕಾರದಿಂದ ನಾಮ ನಿರ್ದೇಶಿತ ಬೆಳ್ತಂಗಡಿ ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ.ಪೆರಿಂಜೆ, ಪಡ್ಡಂದಡ್ಕದ ನಾಟಿ ವೈದ್ಯ ಸಲೀಮ್ ಗರ್ಡಾಡಿ ಬೆಂಗಳೂರಿನ ಕರ್ನಾಟಕ ಹೆಲ್ತ್ ಕ್ಯಾರ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ವೈದ್ಯ ರತ್ನ ಪ್ರಶಸ್ತಿಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆಯವರಿಂದ ಸ್ವೀಕಾರ ಮಾಡಿದ್ದು ಆ ಬಗ್ಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಬ್ದುಲ್ ರಹಿಮಾನ್ ಕಟ್ಟಬಳಿ, ರಝಕ್ ಮದನಿ, ಅಝಿಜ್ ಮಾಲಿಕ್, ಅಶ್ರಫ್ ಮರೋಡಿ, ಮೊಹಮ್ಮದ್ ಶಾಫಿ ಕಿರೋಡಿ, ಫಾರೂಕ್ ವಿಶಾಲ್ ನಗರ ರಫೀಕ್ ಪಡ್ಡ, ಶಬೀರ್ ಪಡ್ಡ, ಅಶ್ರಫ್ ಕಿರೋಡಿ, ಮನ್ಸೂರ್ ಪಡ್ಡಂದಡ್ಕ, ಸಾದಿಕ್ ಪೆರಿಂಜೆ ಮೊದಲದವರು ಉಪಸ್ಥಿತರಿದ್ದರು.