ಬೆಳ್ತಂಗಡಿ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸ ಹಾಗೂ SKSSF ಕಾಶಿಪಟ್ಣ ಶಾಖೆ ವತಿಯಿಂದ ಮುಹಲ್ಲಿಮ್ ಡೇ ಕಾರ್ಯಕ್ರಮ ಹಿದಾಯತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಜಮಾಅತ್ ಅಧ್ಯಕ್ಷ ಕೆ ಎಸ್ ಪುತ್ತುಮೋನು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ಥಳೀಯ ಖತೀಬ ಎಸ್ ಎ ಅಬೂಬಕ್ಕರ್ ನಿಝಾಮಿ ಸಭೆಯನ್ನು ಉದ್ಘಾಟಿಸಿ ವಿಷಯ ಮಂಡಿಸಿದರು, ಮದ್ರಸ ಮುಹಲ್ಲಿಮ್ ಅಕ್ಬರ್ ಅಲಿ ಅಝ್ಹರಿ ಮಾಡನ್ನೂರು ಪ್ರಾರ್ಥಿಸಿ ಸ್ವಾಗತಿಸಿದರು.
ನಂತರ ಮದ್ರಸ ಅಧ್ಯಾಪಕರುಗಳಾದ ಖತೀಬ್ ಉಸ್ತಾದ್ ಹಾಗೂ ಮುಹಲ್ಲಿಮ್ ಉಸ್ತಾದರುಗಳನ್ನು SKSSF ಕಾಶಿಪಟ್ಣ ಶಾಖೆ ವತಿಯಿಂದ ಸನ್ಮಾನಿಸಲಾಯಿತು.
ನಂತರ SKSSF ಶಾಖೆ ಪ್ರಧಾನ ಕಾರ್ಯದರ್ಶಿ ಕೆ ಎಸ್ ಸಹದ್, ಕ್ಲಸ್ಟರ್ ಅಧ್ಯಕ್ಷ ಖಾಲಿದ್ ಅಬ್ದುಲ್ ಖಾದರ್, ಕೆ ಎನ್ ಫಾರೂಖ್, ಸಭೆಯಲ್ಲಿ ಆಶಂಸ ಮಾಡಿದರು.
ಜಮಾಅತ್ ಕೋಶಾಧಿಕಾರಿ ಕೆ ಎಸ್ ಇಸ್ಮಾಯಿಲ್, ಮದ್ರಸ ಉಸ್ತುವಾರಿ ಯೂಸುಫ್ ಹಾಜಿ, SKSSF ಸದಸ್ಯರುಗಳಾದ ಕೆ ಎಸ್ ಸಿರಾಜ್, ಕೆ ಎಸ್ ಆಬಿದ್, ಮದ್ರಸ ಹಳೆ ವಿದ್ಯಾರ್ಥಿ ಹಿಶಾಮ್ ಉಪಸ್ಥಿತರಿದ್ದರು.
ನಂತರ ಖತೀಬ್ ಉಸ್ತಾದ್ ನಮ್ಮನ್ನು ಅಗಲಿದ ಸಮಸ್ತ ಹಾಗೂ ಎಲ್ಲಾ ನೇತಾರರಿಗೂ ಖುರ್ಆನ್ ತಹ್ಲೀಲ್ ಹೇಳಿ ಪ್ರತ್ಯೇಕವಾಗಿ ಪ್ರಾರ್ಥನೆ ನಡೆಸಲಾಯಿತು.
SKSSF ಕಾಶಿಪಟ್ಣ ಶಾಖೆ ಅಧ್ಯಕ್ಷ ಅಬ್ದುಲ್ ಹಮೀದ್ ವಂದಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.