ಗುರುವಾಯನಕೆರೆ: ಕಾರ್ಕಳ ಹೆದ್ದಾರಿ ರಸ್ತೆ ಹಾದು ಹೋಗುವಾಗ ಕಾಣ ಸಿಗುವ ಕಾಪಿನಡ್ಕ ತಿರುವು ಪಕ್ಕ ಸುಮಾರು 50ಮೀಟರ್ ಸಮೀಪ ಬಳಂಜ ಗ್ರಾಮ ಪಂಚಾಯತಿಗೊಳಪಟ್ಟ ಹಿಮರಡ್ಡಕ್ಕೆ ಹೋಗುವ ರಸ್ತೆಯು
ಇತ್ತೀಚೆಗೆ ಅಗಲೀಕರಣವಾಗಿದ್ದು ರಸ್ತೆ ಬದಿ ವಿದ್ಯುತ್ ಕಂಬವು ರಸ್ತೆ ಕಡೆ ವಾಲಿ ತಂತಿಗಳು ರಸ್ತೆ ಮದ್ಯೆ ಜೋತು ಬಿದ್ದು ಇಂದು ನಾಳೆ ಬೀಳುವ ಸ್ಥಿತಿಯ್ಲಲಿದೆ.
ಸ್ವಲ್ಪ ಮುಂದೆ ಬ್ರಹತ್ ಗಾತ್ರದ ಮರವು ಅಪಾಯದಂಚಿನಲ್ಲಿದೆ. ಇದರ ಬಗ್ಗೆ ಪಂಚಾಯತ್ ಸದಸ್ಯರಿಗೆ, ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಗೆ ಮಾಹಿತಿ ಕಳೆದ ಒಂದು ತಿಂಗಳಿನ ಹಿಂದೆಯೇ ಮಾಹಿತಿ ನೀಡಿದ್ದು ಅದೂ ಇದು ಅಂತ ಕುಂಟು ನೆಪ ಉತ್ತರ ನೀಡಿ ಇದುವರೆಗೂ ತೆರವುಗೊಳಿಸುವ ಕೆಲಸ ನಡೆಸಿಲ್ಲ.
ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ವಾಹನ ಸವಾರರು, ಸಾರ್ವಜನಿಕರು ಹೋಗುವ ರಸ್ತೆಯಾಗಿದ್ದು ಹೀಗಾಗಲೇ ಕೆಲವು ಕಡೆ ವಿದ್ಯುತ್ ಅಘಾತಗಳಿಂದ ಅನಾಹುತ ಆಗುತ್ತಿದ್ದು ಮೆಸ್ಕಾಂ ಇಲಾಖೆ, ಅರಣ್ಯ ಅಧಿಕಾರಿಗಳಿಗೆ, ಗ್ರಾಮ ಪಂಚಾಯತ್ ಗೆ ಆದಷ್ಟು ಬೇಗ ಈ ವಿದ್ಯುತ್ ಕಂಬ ಹಾಗೂ ಮರವನ್ನು ತೆರವುಗೊಳಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿಸುತ್ತಿದ್ದಾರೆ.