ಪುದುವೆಟ್ಟು: ಶ್ರೀ.ಧ.ಮಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ಮತ್ತು ನೃತ್ಯ ತರಗತಿಗಳ ಉದ್ಘಾಟನೆಯು ಜೂ.25ರಂದು ನಡೆಯಿತು.
ಸ್ಥಳೀಯ ಉದ್ಯಮಿ ಹಾಗೂ ಪುದುವೆಟ್ಟು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷೆ ವಾರಿಜಾ.ಎಸ್ ಇವರು ಉದ್ಘಾಟನೆಯನ್ನು ನೆರವೇರಿಸಿ, ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಚಟುವಟಿಕೆಗಳಷ್ಟೇ ಸಹ ಪಠ್ಯ ಚಟುವಟಿಕೆಗಳು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದುದರಿಂದ ವಿದ್ಯಾರ್ಥಿಗಳು ಸಹ ಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಯಕ್ಷಗಾನ ತರಬೇತುದರರಾದ ಎಸ್.ಡಿ.ಎಂ.ಕಲಾ ಕೇಂದ್ರದ ಯಕ್ಷಗಾನ ಗುರುಗಳು ಅರುಣ್ ಕುಮಾರ್ ಹಾಗೂ ನೃತ್ಯ ತರಬೇತುದಾರ ಎಸ್ ಡಿ ಎಮ್ ಕಲಾ ಕೇಂದ್ರದ ಕುಮಾರಿ ಚೈತ್ರ ಭಟ್ ಇವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಿರಿಯ ಶಿಕ್ಷಕಿ ತೇಜಾವತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯ ಶೀನಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶೀಲ.ಎನ್. ಇವರು ಸ್ವಾಗತಿಸಿ, ಪವನ್ ಕುಮಾರ್ ಇವರು ಕಾರ್ಯಕ್ರಮ ನಿರೂಪಿಸಿದರು.ಪುಷ್ಪಲತಾ ಇವರು ಧನ್ಯವಾದ ಸಮರ್ಪಿಸಿದರು.