ಪುದುವೆಟ್ಟು: ಶ್ರೀ ಧ.ಮಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಕೈ ಬರಹದ ತರಬೇತಿ ಕಾರ್ಯಗಾರ

0

ಪುದುವೆಟ್ಟು: ಪುದುವೆಟ್ಟು ಶ್ರೀ.ಧ.ಮಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.03ರಂದು ಅಂದವಾದ ಆಂಗ್ಲ ಭಾಷಾ ಬರವಣಿಗೆಯ ಬಗ್ಗೆ ಕಾರ್ಯಗಾರ ನಡೆಯಿತು.ಶ್ರೀ ಲಕ್ಷ್ಮಿ ನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂಚನ ಇಲ್ಲಿನ ನಿವೃತ್ತ ಮುಖ್ಯೋಪಾಧ್ಯಾರು ಹಾಗು ಆಂಗ್ಲ ಭಾಷಾ ಶಿಕ್ಷಕರಾದ ಉಜಿರೆಯ ಹರ್ಷಕುಮಾರ್ ಕೆ.ಎನ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಇಟಾಲಿಕ್ ಶೈಲಿಯಲ್ಲಿ ಇಂಗ್ಲಿಷ್ ಬರವಣಿಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅತ್ತ್ಯುತ್ತಮವಾದ ಪ್ರಾಯೋಗಿಕ ತರಬೇತಿಯನ್ನು ನೀಡಿದರು.

ಕಾರ್ಯಾಗಾರದ ಮಾರ್ಗದರ್ಶಕರು ಹಾಗು ಶಾಲಾ ಮುಖ್ಯೋಪಾಧ್ಯಾಯ ಶೀನಪ್ಪ ಗೌಡ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಜಾತ ಇವರು ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕ ಪವನ್ ಕುಮಾರ್ ಧನ್ಯವಾದ ಸಮರ್ಪಿಸಿದರು.ನಿವೃತ್ತ ಶಿಕ್ಷಕಿ ವಾರಿಜಾ ಹರ್ಷಕುಮಾರ್ ಇವರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here