



ಬೆಳ್ತಂಗಡಿ: ಮಡಂತ್ಯಾರು ಕಾಲೇಜು ರಸ್ತೆ ಬಳಿಯ ನಿವಾಸಿಗಳಾದ ರೋಬರ್ಟ್ ಡಿಸೋಜಾ ಮತ್ತು ಎಲಿಜಬೆತ್ ಡಿಸೋಜಾ ದಂಪತಿಯ ಪುತ್ರ ಡೇವಿಡ್ ಡಿ’ಸೋಜಾ(40ವ) ಅವರು ಕುವೈತ್ ನಲ್ಲಿ ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ.


ಕುವೈತ್ ನಲ್ಲಿ 15 ವರ್ಷಗಳಿಂದ ಉದ್ಯೋಗಿಯಾಗಿದ್ದ ಇವರು ಹೃದಯಾಘಾತದಿಂದ ಜು.3ರಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ರಿಶೆಲ್ ಡಿ’ಸೋಜಾ, ಪುತ್ರಿ ಡನಿಕಾಡಿ’ಸೋಜಾ, ಸಹೋದರ ಡೊಮಿನಿಕ್ ಅವರನ್ನು ಅಗಲಿದ್ದಾರೆ.









