ಅರಸಿನಮಕ್ಕಿ: ಗ್ರಾ.ಪಂ ಮತ್ತು ಪುತ್ತೂರು ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ನ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

0

ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾಮ ಪಂಚಾಯತ್‌ ಮತ್ತು ಪುತ್ತೂರು ಕಂಪಾನಿಯೋ ನೆಮ್ಮದಿ ವೆಲ್‌ನೆಸ್‌ ಸೆಂಟರ್‌ ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರವು ಜು.03ರಂದು ಅರಸಿನಮಕ್ಕಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪ್ರಾರಂಭಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅರಸಿನಮಕ್ಕಿ ಮಲ್ನಾಡು ವಸ್ತ್ರ ಬಂಡಾರ ಮ್ಹಾಲಕರು ಕೆ.ಧರ್ಣಪ್ಪ ಗೌಡ ನೆರವೇರಿಸಿದರು.ಪುತ್ತೂರು ನೆಮ್ಮದಿ ವೆಲ್‌ನೆಸ್‌ ಸೆಂಟರ್‌ ಮಾಲಕ ಕೆ.ಪ್ರಭಾಕ‌ರ್ ಸಾಲಿಯಾನ್ ಮಾಹಿತಿ ನೀಡಿದರು.ವೇದಿಕೆಯಲ್ಲಿ ಅರಸಿನಮಕ್ಕಿ ಗ್ರಾ.ಪಂ. ಉಪಾಧ್ಯಕ್ಷ ಸುಧೀ‌ರ್ ಕುಮಾ‌ರ್, ಗ್ರಾ.ಪಂ. ಸದಸ್ಯ ಪ್ರೇಮಚಂದ್ರ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಪ್ರಭಾಕರ ಸಾಲ್ಯಾನ್ ಸ್ವಾಗತಿಸಿ, ಧನ್ಯವಾದವಿತ್ತರು.

ಫೂಟ್ ಫಲ್ಸ್ ಥೆರಪಿಯು ಜು.17ರವರೆಗೆ ನಡೆಯಲಿದ್ದು, ಪ್ರತಿ ದಿನ ಬೆಳಗ್ಗೆ 9.30ರಿಂದ ಮಧ್ಯಾಹ್ನ 4.30ರವರೆಗೆ ನಡೆಯಲಿದೆ.

p>

LEAVE A REPLY

Please enter your comment!
Please enter your name here