ಕೊಕ್ಕಡ: ಮೊಬೈಲ್ ವಾಟ್ಸಪ್ ಆ್ಯಪ್ ನಲ್ಲಿ ಯೂನಿಯನ್ ಬ್ಯಾಂಕ್ ಎಂದು ಮೆಸೇಜ್ ಲಿಂಕ್ ಕಳಿಸಿ ಲಕ್ಷಾಂತರ ಹಣ ದೋಚಿ ವಂಚಿಸಿದ ಘಟನೆ ಜೂ.30ರಂದು ಕೊಕ್ಕಡದಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಯೋರ್ವರು ಕೊಕ್ಕಡ ಗ್ರಾಮದ ಬಡೆಕೈಲ್ ನಿವಾಸಿ ಉದ್ಯಮಿ ಶ್ರೀನಾಥ್ ಅವರ ಮೊಬೈಲ್ ಗೆ ಯೂನಿಯನ್ ಬ್ಯಾಂಕ್ ಎಂದು ಡೌನ್ ಲೋಡ್ ಮಾಡುವಂತೆ ಲಿಂಕ್ ಇರುವ ಮೆಸೇಜ್ ಬಂದಿದ್ದು ಲಿಂಕ್ ಓಪನ್ ಆದ ತಕ್ಷಣ ಓಟಿಪಿ ಬಂದು ಅದು ಆಟೋ ಜನರೇಟ್ ಆಗಿ ಖಾತೆಯಲ್ಲಿದ್ದ 1ಲಕ್ಷದ 11 ರೂಪಾಯಿಯ ಪೈಕಿ 1 ಲಕ್ಷ ಹಣವನ್ನು ಡ್ರಾ ಮಾಡಿದ ಘಟನೆ ನಡೆದಿದೆ.
ಈ ಬಗ್ಗೆ ಧರ್ಮಸ್ಥಳ ಸೈಬರ್ ಕ್ರೈಂ ಗೆ ಹಾಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
p>