ಗೇರುಕಟ್ಚೆ; ಪರಪ್ಪು – ಕೊಯ್ಯೂರು ಕ್ರಾಸ್ ನಲ್ಲಿ ಅಟೋ ರಿಕ್ಷಾ ಪಲ್ಟಿ

0

ಗೇರುಕಟ್ಟೆ: ಗೇರುಕಟ್ಟೆ ಸಮೀಪದ ಪರಪ್ಪು -ಕೊಯ್ಯೂರು ರಸ್ತೆಯ ಕ್ರಾಸ್ ಪಕ್ಕದಲ್ಲಿ ಆಟೋ ರಿಕ್ಷಾ ಪಲ್ಟಿಯಾದ ಘಟನೆ ಜು.1 ರಂದು ನಡೆಯಿತು.

ಸುಣ್ಣಲಡ್ಡ ಮನೆಯಿಂದ ಸಿದ್ಧೀಕ್ ಗೇರುಕಟ್ಟೆ ಕಡೆಗೆ ತನ್ನ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಬರುತ್ತಿದಂತೆ ತಾಂತ್ರಿಕ ದೋಷದಿಂದಾಗಿ ರಸ್ತೆಯ ಪಕ್ಕದಲ್ಲಿರುವ ಸೂಚನೆ ಫಲಕದ ಕಂಬಕ್ಕೆ ಡಿಕ್ಕಿಯಾಗಿದೆ.

ಚಾಲಕ ಮಾತ್ರ ಇದ್ದು ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ.

ವಿಷಯ ತಿಳಿದು ಸ್ಥಳೀಯ ರಿಕ್ಷಾ ಚಾಲಕನ ಮಾಲೀಕ ಸಂಘದ ಸದಸ್ಯರು ಆಗಮಿಸಿ ಚರಂಡಿಯಿಂದ ರಿಕ್ಷಾ ಮೇಲೆ ಎತ್ತಲು ಸಹಕರಿಸಿದರು.

LEAVE A REPLY

Please enter your comment!
Please enter your name here