

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಧರ್ಮಸ್ಥಳದಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಜೂ.29ರಂದು ನೆರವೇರಿತು.ಮುಖ್ಯ ಅತಿಥಿಗಳಾಗಿ ಸಾಹಿತಿ ಕವಿ ಹಾಗೂ ಪ್ರಸೂತೀ ತಜ್ಞೆಯಾಗಿ ಪ್ರವೃತ್ತಿಯಲ್ಲಿ ವೈದ್ಯೆ ವೀಣಾ ಎನ್.ಸುಳ್ಯ ಆಗಮಿಸಿದ್ದರು.

ಈ ಕಾರ್ಯಕ್ರಮ ದೀಪ ಪ್ರಜ್ವಾಲನೆಯೊಂದಿಗೆ ಹಾಗೂ ಅಣಕು ರಾಕೆಟ್ ಉಡಾವಣೆಯೊಂದಿಗೆ ಚಾಲನೆ ಪಡೆಯಿತು.ಬಳಿಕ ಮಾತನಾಡಿದ ಅವರು ಶಾಲೆಯಲ್ಲಿ ಸಂಘಗಳ ಮಹತ್ವ ಆದರಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನ ವಿದ್ಯಾರ್ಥಿಗಳು ಅದನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಂಬಿತ್ಯಾದಿ ವಿಚಾರಗಳನ್ನು ತಿಳಿಹೇಳಿದರು. ವಿದ್ಯಾರ್ಥಿಗಳು ತಮ್ಮ ತಮ್ಮ ಸಂಘಗಳ ವಾರ್ಷಿಕ ಯೋಜನೆಯನ್ನು ನಾಟಕ, ನೃತ್ಯ, ಕವನವಾಚನ, ಮೈಮ್ ಶೊ, ಪಿಪಿಟಿ ಪ್ರದರ್ಶನ,ವಾರ್ತೆ ವಾಚನ ಇತ್ಯಾದಿಗಳ ಮುಖಾಂತರ ವಿಶಿಷ್ಟವಾಗಿ ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಶಾಲಾ ಸಂಘಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಪಾಲಚಂದ್ರ ವೈ, ಲಕ್ಷ್ಮಿನಾರಾಯಣ, ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್, ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಆಗಮಿಸಿದ್ದರು.