ಮಿನ್ಹಾಜುಲ್ ಹುದಾ ವತಿಯಿಂದ ಉಚಿತ ವಿವಾಹ

0

ಬೆಳ್ತಂಗಡಿ: ವೇಣೂರು ಸಮೀಪದ ಗೋಳಿಯಂಗಡಿ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಮಿನ್ಹಾಜುಲ್ ಹುದಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎರಡನೇ ಬಾರಿ ಉಚಿತ ವಿವಾಹವು ಜೂ. 24ರಂದು ಕಡಬ ಸಮೀಪದ ಮರ್ದಾಳದಲ್ಲಿ ನಡೆಯಿತು.

ಮದುವೆಯ ಸಂಪೂರ್ಣ ಖರ್ಚನ್ನು ವಹಿಸಿ ಸಂಸ್ಥೆಯ ವತಿಯಿಂದ ಒಂದು ಯತೀಂ ಹುಡುಗಿಯ ವಿವಾಹವು ನಡೆಸಿ ಕೊಡಲಾಯಿತು.

ಮದುವೆಯ ನಿಖಾಹ್ ನೇತೃತ್ವವನ್ನು ಉಸ್ತಾದ್ ಅಬ್ದುಲ್ ಹಕೀಂ ಮದನಿ (ಕರೋಪಾಡಿ ಉಸ್ತಾದ್) ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಬದ್ರುದ್ದೀನ್ ಲತೀಫಿ, ಕಾರ್ಯದರ್ಶಿ ಸಿದ್ದೀಕ್ ಗೋಳಿಯಂಗಡಿ, ಸಂಚಾಲಕ ಹನೀಫ್ ಬಾಹಸನಿ ಸೇರಿದಂತೆ ಹಲವೂ ಸಾದಾತ್, ಉಲಮಾ, ಉಮರಾಗಳು, ಪುರುಷರು ಮಹಿಳೆಯರು ಭಾಗವಹಿಸಿದ್ದರು.

p>

LEAVE A REPLY

Please enter your comment!
Please enter your name here