ಬೈಕ್ ಗೆ ನಾಯಿ ಅಡ್ಡ ಬಂದು ಬೈಕ್ ಪಲ್ಟಿ- ನವ ವಿವಾಹಿತೆ ಸಾವು

0

ನಾರಾವಿ: ರಸ್ತೆಯಲ್ಲಿ ನಾಯಿಯೊಂದು ಬೈಕ್‌ಗೆ ಅಡ್ಡ ಬಂದ ಪರಿಣಾಮ ಬೈಕ್‌ ಪಲ್ಟಿಯಾಗಿ ನವವಿವಾಹಿತೆ ದಾರುಣ ಸಾವಿಗೀಡಾದ ಘಟನೆ ಹೊಸ್ಮಾರು ಬಳಿ ಸಂಭವಿಸಿದೆ.

ಈದು ಗ್ರಾಮದ ಕರೆಂಬಾಲುವಿನ ವಿಶಾಲ್ ಅವರ ಪತ್ನಿ ನೀಕ್ಷಾ (26ವ) ಎಂಬವರೇ ಮೃತಪಟ್ಟ ಮಹಿಳೆ.

ಕಾರ್ಕಳ-ಗುರುವಾಯನಕೆರೆ ರಸ್ತೆಯ ಹೊಸ್ಮಾರು ಸೇತುವೆ ಬಳಿ ಜೂ.28ರ ಸಂಜೆ ಗಂಡನೊಂದಿಗೆ ಬೈಕ್‌ನಲ್ಲಿ ಸಾಗುತ್ತಿದ್ದಾಗ ನಾಯಿ ದಿಢೀರನೆ ಅಡ್ಡ ಬಂದ ಪರಿಣಾಮ ಬೈಕ್‌ ರಸ್ತೆಗೆಸೆಯಲ್ಪಟ್ಟಿತ್ತು.

ಘಟನೆಯಿಂದ ನೀಕ್ಷಾ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು.ನೀಕ್ಷಾ ಅವರಿಗೆ ಎರಡು ತಿಂಗಳ ಹಿಂದೆಯಷ್ಟೇ ಮದುವೆ ಆಗಿತ್ತು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here