p>
ಉಜಿರೆ: ಉಜಿರೆಯ ಬೆಳಾಲ್ ಕ್ರಾಸ್ ಬಳಿ ಮುಂಜಾನೆ ಬೆಂಝ್ ಕಾರು ಡಿವೈಡರ್ ಗೆ ಡಿಕ್ಕಿಯಾದ ಘಟನೆಯಲ್ಲಿ ಯುವ ಉದ್ಯಮಿ,ಕಾರು ಚಾಲಕ ಪ್ರಜ್ವಲ್ ನಾಯಕ್ ವಿಧಿವಶರಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರಜ್ವಲ್ ರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಅಪಘಾತದಲ್ಲಿ ನಿಧನ ಹೊಂದಿದ ವಾಹನ ಸವಾರರನ್ನು ಬೆಳ್ತಂಗಡಿಯ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರಾದ ಪ್ರಮೋದ್. ಆರ್. ನಾಯಕ್ ಅವರ ಪುತ್ರ ಪ್ರಜ್ವಲ್ ಎಂದು ಗುರುತಿಸಲಾಗಿದೆ.
p>