ಲಾಯಿಲದಲ್ಲಿ ಬೈಕ್- ಬಸ್‌ ಅಪಘಾತ: ನಡ ಗ್ರಾಮ ಸಹಾಯಕ ಜಯರಾಜ್ ಮೃತ್ಯು

0

ಬೆಳ್ತಂಗಡಿ: ಲಾಯಿಲ ಸಮೀಪದ ಪುತ್ರಬೈಲು ಎಂಬಲ್ಲಿ ಬೈಕ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್‌ ಸವಾರ ಮೃತಪಟ್ಟ ಘಟನೆ ಜೂನ್ 28ರಂದು ಬೆಳಿಗ್ಗೆ ನಡೆದಿದೆ.‌
ಬಳಂಜ ನಿವಾಸಿಯಾಗಿದ್ದು ನಡ ಗ್ರಾಮಕರಣಿಕರ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿದ್ದ ಜಯರಾಜ್(45ವ) ಮೃತಪಟ್ಟವರು.

ಬೆಳ್ತಂಗಡಿ ಕಡೆಯಿಂದ ನಡ ಕಚೇರಿಗೆ ಜಯರಾಜ್ ಅವರು ಬೈಕಿನಲ್ಲಿ‌ ತೆರಳುತ್ತಿದ್ದಾಗ ಕಿಲ್ಲೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಜಯರಾಜ್ ಅವರಿಗೆ ತ್ರೀವ ಗಾಯವಾಗಿದ್ದು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.ಬೈಕ್ ರಾಂಗ್ ಸೈಡಿನಿಂದ ಬಂದು ಬಸ್ ಗೆ ಡಿಕ್ಕಿ ಹೊಡೆದಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here