ಶಿಬಾಜೆ: ಸ್ಟೇ ವೈಯರ್ ಗೆ ವಿದ್ಯುತ್ ಸ್ವರ್ಶಿಸಿ ಯುವತಿ ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಬಾಜೆ ಗ್ರಾಮದಲ್ಲಿ ಜೂ.27 ರಂದು ಸಂಜೆ ಸಂಭವಿಸಿದೆ.
ಬರ್ಗುಲಾ ಎಂಬಲ್ಲಿನ ಗಣೇಶ್ ಶೆಟ್ಟಿ ಮತ್ತು ರೋಹಿನಿ ಪುತ್ರಿ ಪ್ರತೀಕ್ಷಾ ಶೆಟ್ಟಿ (20) ಎಂಬವರು ಇಂದು ಸಂಜೆ ಮನೆಯ ರಸ್ತೆ ಸಮೀಪ ಪಾರ್ಸೆಲ್ ಬಂದಿದ್ದರಿಂದ ರಸ್ತೆಗೆ ಬಂದಾಗ ನೀರಿನಲ್ಲಿ ವಿದ್ಯುತ್ ಪ್ರವಹಿಸಿದೆ. ಸ್ಟೇ ವೈಯರ್ ಗೆ ವಿದ್ಯುತ್ ಸ್ವರ್ಶಿಸಿ ಅದು ನೀರಿಗೆ ಪ್ರವಹಿಸಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಪ್ರತೀಕ್ಷಾ ಶೆಟ್ಟಿ ಕೊನೆಯುಸಿರೆಳೆದಿದ್ದಾರೆ. ಜೂನಿಯರ್ ಕೊಕ್ಕಡ ಜೇಸಿ ಜೂನಿಯರ್ ಘಟಕದ ಮಾಜಿ ಅಧ್ಯಕ್ಷೆಯಾಗಿದ್ದರು.
ಸಾವನ್ನಪ್ಪಿದ ಯುವತಿ ಕೊಕ್ಕಡದ ಖಾಸಗಿ ವಸತಿ ಗ್ರಹದಲ್ಲಿ ಉದ್ಯೋಗಿಯಾಗಿದ್ದರು. ತಂದೆ ಗಣೇಶ್ ಶೆಟ್ಟಿ, ತಾಯಿ ರೋಹಿಣಿ, ತಂಗಿ ವೀಕ್ಷ, ತಮ್ಮ ಸುಜಯ್ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಯುವತಿಯ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
p>