


ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಗುರುದತ್ತ ಮರಾಠೆ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷೆಯಾಗಿ ವೈಷ್ಣವಿ ಭಟ್ ದ್ವಿತೀಯ ವಿಜ್ಞಾನ, ಕಾರ್ಯದರ್ಶಿಗಳಾಗಿ ದ್ವಿತೀಯ ವಿಜ್ಞಾನದ ಅಜಯ್, ರತನ್, ಪ್ರತ್ಯಕ್ಷಿಣಿ, ದ್ವಿತೀಯ ವಾಣಿಜ್ಯ ಶಾಸ್ತ್ರದ ಪ್ರದೀಪ, ಪೃಥ್ವಿ ಹೆಗಡೆ, ರಚನಾ ಕೆ., ಪ್ರಥಮ ವಿಜ್ಞಾನದ ಹಂಸಿನಿ ಭಿಡೆ, ಪ್ರಣಮ್ಯಾ, ಯಜ್ಞಿತ್, ಪ್ರಥಮ ಕಲಾ ವಿಭಾಗದ ಪ್ರಣವಕೃಷ್ಣ, ಪ್ರಥಮ ವಿಜ್ಞಾನದ ಪ್ರಸನ್ನಾ, ಫಾತಿಮಾ ಇಶಾನಾ ಅಬೂಬಕರ್, ಶ್ರೀಧರ ಹೆಗಡೆ, ದಿಗಂತ್ ಇವರು ಆಯ್ಕೆ ಆಗಿದ್ದಾರೆ.


 
            
