ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ

0

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಮತದಾನವು ಜೂನ್ 22ರಂದು ನಡೆಯಿತು.

ಈ ಶೈಕ್ಷಣಿಕ ವರ್ಷದ ಮತದಾನವು ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಮೂಲಕ ನೆರವೇರಿತು. ಮಂಗಳೂರಿನ ಕೆನರ ಕಮ್ಯುನಿಕೇಶನ್ ಸೆಂಟರ್ ನ ನಿರ್ದೇಶಕ ವಂ|ಸ್ವಾ|ಅನಿಲ್ ಫೆರ್ನಾಂಡಿಸ್ ರವರು ವಿದ್ಯಾರ್ಥಿಗಳಿಗೆ ಇವಿಎಂನಲ್ಲಿ ಓಟು ಹಾಕುವ ಬಗ್ಗೆ ಮಾರ್ಗದರ್ಶನ ನೀಡಿ, ಚುನಾವಣೆಗೆ ಸಿದ್ಧತೆಗಳನ್ನು ಮಾಡಿದರು.

ಶಾಲಾ ನಾಯಕನ ಸ್ಥಾನಕ್ಕೆ 10ನೇ ತರಗತಿಯ ಒಟ್ಟು 5 ವಿದ್ಯಾರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದರು.ಉಪನಾಯಕ ಸ್ಥಾನಕ್ಕೆ 9ನೇ ತರಗತಿಯ ಒಟ್ಟು 3 ವಿದ್ಯಾರ್ಥಿಗಳು  ನಾಮಪತ್ರವನ್ನು ಸಲ್ಲಿಸಿದರು.ಲಿಸ್ಟನ್ ಕಾರ್ಲ್ ಶಾಲಾ ನಾಯಕನಾಗಿ ಹಾಗೂ ರಿಶೋನ್ ಲೋಬೊ ಉಪನಾಯಕನಾಗಿ ಬಹುಮತದಿಂದ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ| ದೀಪಕ್ ಲಿಯೋ ಡೇಸರವರು ಈ ಶೈಕ್ಷಣಿಕ ವರ್ಷದ ಮತದಾನವು ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮೂಲಕ ನಡೆಸಲು ಉತ್ತೇಜಿಸಿ ಮಾರ್ಗದರ್ಶನ ನೀಡಿದರು. ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here