

ನಡ: ಪಡ್ಡು ಹಾಲು ಉತ್ಪಾದಕರ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಆವರಣದಲ್ಲಿ ಜೂ.24ರಂದು ಜರುಗಿತು.
ಸಂಘದ ಅಧ್ಯಕ್ಷ ಪ್ರವೀಣ್ ವಿ.ಜಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೆ.ಎಮ್.ಎಫ್ ವೈದ್ಯಾಧಿಕಾರಿ ಡಾ|ಗಣಪತಿ ಹಾಲು ಸಂಗ್ರಹ, ಹಾಲಿನ ಇಳುವರಿ, ದನಗಳ ಸಾಕಣೆ ಬಗ್ಗೆ ಮಾಹಿತಿ ನೀಡಿದರು. ಸಂಘವು ಆರ್ಥಿಕ ವರ್ಷದಲ್ಲಿ ರೂ. 2,64,000 ಲಾಭ ಹೊಂದಿದ್ದು, ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಸಂಘದ ಇಬ್ಬರು ಸದಸ್ಯರಿಗೆ ಆರೋಗ್ಯ ಸಹಾಯ ಧನ ಹಸ್ತಾಂತರಿಸಲಾಯಿತು.
ಸಂಘಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡುವ ಸದಸ್ಯರಾದ ಪ್ರಥಮ ಆಶ್ರಯ ಅಜ್ರಿ ಮೂಡಬೆಟ್ಟು, ದ್ವಿತೀಯ ಪ್ರವೀಣ್ ವಿ.ಜಿ., ತೃತೀಯ ಸುಂದರ ಗೌಡ ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಯಮುನಾ, ಸಂಘದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಶಾಂತಿ ವರದಿ ವಾಚಿಸಿದರು. ಉಪಾಧ್ಯಕ್ಷೆ ಸುಮಿತ್ರಾ ಶೆಟ್ಟಿ ಸ್ವಾಗತಿಸಿ, ನಿರ್ದೇಶಕಿ ಸುಲತಾ ಧನ್ಯವಾದವಿತ್ತರು.